

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ಹಣ್ಣು ಬೆಳೆಗಾರರಿಗೆ ವರದಾನವಾಗಲಿರುವ ಕೋಲ್ಡ್ ಸ್ಟೋರೇಜ್ ನಿರ್ಮಾಣ ಕಾರ್ಯ ಚುರುಕು ಪಡೆದಿದ್ದು, ಎಂಟು ತಿಂಗಳಲ್ಲಿ ಕಾರ್ಯಾರಂಭವಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಹಣ್ಣು, ತರಕಾರಿಗಳ ಬೆಲೆ ಕುಸಿದ ಸಂದರ್ಭದಲ್ಲಿ ಸಲನ್ನು ಶೈತ್ಯಾಗಾರದಲ್ಲಿ ಶೇಖರಿಸಿ ದರ ಕುದುರಿದ ಸಂದರ್ಭದಲ್ಲಿ ಮಾರಾಟ ಮಾಡಿ ಲಾಭ ಗಳಿಸಬಹುದು ಎಂಬುದು ಈ ಯೋಜನೆ ಉದ್ದೇಶ.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಕನ್ನಮಂಗಳ ಪಂಚಾಯಿತಿಯ ಪೂಜೇನಹಳ್ಳಿ ತೋಟಗಾರಿಕಾ ಪ್ರದೇಶದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಕೆಕ್ ಸಂಸ್ಥೆಗೆ ಹೊಣೆ ಹೊರಿಸಲಾಗಿದೆ. ತೋಟಗಾರಿಕೆ ಇಲಾಖೆ ವ್ಯಾಪ್ತಿಯ 53 ಎಕರೆ ವಿಸ್ತೀರ್ಣದ ಗಾಂಧಿ ಶತಮಾನದ ತೋಟದಲ್ಲಿ 4 ಎಕರೆಯನ್ನು ಕೋಲ್ಡ್ ಸ್ಟೋರೇಜ್ ಘಟಕಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 ವರ್ಷದ ಹಿಂದೆ ಟೆಂಡರ್: ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಹಾಗೂ ವಿದೇಶಗಳಿಗೆ ತೋಟಗಾರಿಕೆ ಬೆಳೆಗಳನ್ನು ರಪ್ತು ಮಾಡುವ ಸಲುವಾಗಿ 2 ವರ್ಷದ ಹಿಂದೆಯೇ ಟೆಂಡರ್ ಪ್ರಕ್ರಿಯೆ ನಡೆದಿದ್ದರೂ, ತಾಂತ್ರಿಕ ಕಾರಣಗಳಿಂದ ಯೋಜನೆ ಅನುಷ್ಠಾನ ವಿಳಂಬವಾಗಿತ್ತು.
ಮ್ಯಾಂಗೋ ಜ್ಯೂಸ್!: ಶೇಖರಿಸುವ ಹಣ್ಣುಗಳಿಂದ ಪಾನೀಯ, ಜಾಮ್‌ನಂಥ ತಿನಿಸು ತಯಾರಿಸಿ ಲಾಭ ಗಳಿಸಬಹುದು. ಮಾವಿನ ಸೀಸನ್‌ನಲ್ಲಿ ಹೇರಳವಾಗಿ ಮಾವು ಸಲು ಮಾರುಕಟ್ಟೆ ಪ್ರವೇಶಿಸುವುದರಿಂದ ದರ ಕುಸಿಯುತ್ತದೆ. ಇಂಥ ಸಂದರ್ಭದಲ್ಲಿ ಶೇಖರಿಸಿ ಅಗತ್ಯವಾದಾಗ ಮಾರಾಟ ಮಾಡಲು ಈ ಘಟಕ ಸಹಕಾರಿಯಾಗಿದೆ.
ಬ್ರ್ಯಾಂಡ್ ನೀಡಬಹುದು: ಮಾವು, ಬಾಳೆಯಂಥ ಉತ್ಪನ್ನಗಳನ್ನು ಘಟಕದಲ್ಲಿ ಮಾಗಿಸಿ ಅವುಗಳನ್ನು ಪ್ಯಾಕ್ ಮಾಡಿ ಬ್ರ್ಯಾಂಡ್ ನೀಡಿ ಮಾರಾಟ ಮಾಡಲು ಅವಕಾಶವಿದೆ. ಇದರಿಂದ ರೈತರು ಹೆಚ್ಚಿನ ಲಾಭ ಕಂಡುಕೊಳ್ಳಬಹುದು, ಈಗಾಗಲೇ ಜಿಲ್ಲೆಯಲ್ಲಿರುವ ಖಾಸಗಿ ಕೋಲ್ಡ್‌ಸ್ಟೋರೆಜ್‌ಗಳಿಗೆ ಹೋಲಿಸಿದರೆ ಸರ್ಕಾರದ ಈ ಘಟಕದಲ್ಲಿ ರಿಯಾಯಿತಿಯಲ್ಲಿ ಬಾಡಿಗೆ ನಿಗದಿಪಡಿಸಲಾಗುತ್ತದೆ. ಇದು ಆರ್ಥಿಕ ಹೊರೆ ತಗ್ಗಿಸುತ್ತದೆ ಎನ್ನಲಾಗಿದೆ.
ಪರಿಹಾರ ಕಂಡ ತಕರಾರು: ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿಯಿಂದ ಹತ್ತಿರದಲ್ಲೇ ಇರುವ ಪೂಜೇನಹಳ್ಳಿ ತೋಟಗಾರಿಕೆ ಪ್ರದೇಶಕ್ಕೆ ಸಾಗಲು ರಸ್ತೆ ತಕರಾರು ಎದುರಾಗಿತ್ತು. ಶೈತ್ಯಾಗಾರ ಕಾರ್ಯಾರಂಭ ಮಾಡಿದರೆ, ರೈತರು ಬೆಳೆ ಸಾಗಿಸಲು ರಸ್ತೆ ಅವಶ್ಯಕತೆ ಇದೆ. ಆದರೆ ಶೈತ್ಯಾಗಾರಕ್ಕೆ ಗುರುತಿಸಿರುವ ಪ್ರದೇಶಕ್ಕೆ ಸಾಗಲು ಸೂಕ್ತ ರಸ್ತೆ ಇಲ್ಲ ಎಂಬ ಮಾತು ಕೇಳಿಬಂದಿತ್ತು. ಇದಕ್ಕೆಲ್ಲ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದು ಎಲ್ಲ ಸಮಸ್ಯೆಗಳು ನಿವಾರಣೆಯಾಗಿವೆೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೋಟಗಾರಿಕೆ ಬೆಳೆಗಾರರಿಗೆ ಈ ಘಟಕ ವರದಾನವಾಗಲಿದೆ. ಉತ್ಪನ್ನಗಳನ್ನು ಶೇಖರಿಸುವ ಸೌಲಭ್ಯವಿರುವುದರಿಂದ ಆರ್ಥಿಕ ನಷ್ಟದಿಂದ ಪಾರಾಗಬಹುದು, ಏರ್‌ಪೋರ್ಟ್ ಹತ್ತಿರದಲ್ಲಿರುವುದರಿಂದ ವಿದೇಶಗಳಿಗೆ ರ್ತು ಮಾಡಲು ಅನುಕೂಲವಾಗಲಿದೆ. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ಸುಮಾರು 54 ಮೆಟ್ರಿಕ್ ಟನ್ ಹಣ್ಣು ಶೇಖರಣೆ ಸಾಮರ್ಥ್ಯದ ಘಟಕವಾಗಿದ್ದು, ಮಾವು, ಬಾಳೆಯಂತಹ ಉತ್ಪನ್ನಗಳನ್ನು ಮಾಗಿಸುವ, ಅವುಗಳನ್ನು ಪ್ಯಾಕ್ ಮಾಡಿ ಬ್ರ್ಯಾಂಡ್ ನೀಡಲು ಸಹಕಾರಿಯಾಗಿದೆ. ಇದರಿಂದ ರೈತರಿಗೆ ಲಾಭ ಸಿಗಲಿದೆ. ಏಳೆಂಟು ತಿಂಗಳಲ್ಲಿ ಘಟಕ ಕಾರ್ಯಾರಂಭವಾಗಲಿದೆ. ಮಹಾಂತೇಶ್ ಮರಗೂಡು, ತೋಟಕಾರಿಕೆ ಇಲಾಖೆ ಉಪನಿರ್ದೇಶಕ