ನಾಣ್ಯಗಳು ನಾಡಿನ ಚಾರಿತ್ರಿಕ ಕುರುಹು: ಪ್ರೊ.ಎಂ.ಜಿ.ಹೆಗಡೆ

28 Jaggu 3
ಬೆಳಗಾವಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಟಕ ಮಹಾವಿದ್ಯಾಲಯದ ಇತಿಹಾಸ ವಿಭಾಗವು ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಣ್ಯಗಳ ಪ್ರದರ್ಶನವನ್ನು ಉದ್ಘಾಟಿಸಿ ಪ್ರಾಚಾರ್ಯ ಪ್ರೊ.ಎಂ.ಜಿ.ಹೆಗಡೆ ಉದ್ಘಾಟಿಸಿದರು. ಡಾ.ಸದಾಶಿವ ಮುಗಳಿ, ಡಾ. ನೂತನ ದೇಸಾಯಿ, ಭಾಗ್ಯಶ್ರೀ ಹೊನ್ನಕ್ಕನವರ, ಸಿದ್ಧಾರೂಢ ಮೇತ್ರಿ ಇತರರಿದ್ದರು.
Published on

ಬೆಳಗಾವಿ: ನಾಣ್ಯಗಳು ಇತಿಹಾಸದ ಪ್ರಮುಖ ಪುರಾತತ್ವ ಮೂಲವಾಗಿದೆ. ಅವು ಭಾಷೆ, ಆಡಳಿತ, ಧರ್ಮ, ಆರ್ಥಿಕತೆ ಬಗ್ಗೆ ಮಾಹಿತಿ ಒದಗಿಸುತ್ತವೆ ಎಂದು ಪ್ರಾಚಾರ್ಯ ಪ್ರೊ.ಎಂ.ಜಿ.ಹೆಗಡೆ ಅಭಿಪ್ರಾಯಪಟ್ಟರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಟಕ ಮಹಾವಿದ್ಯಾಲಯದ ಇತಿಹಾಸ ವಿಭಾಗವು ಐ.ಕ್ಯೂ.ಎ.ಸಿ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಣ್ಯಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ, ನಾಣ್ಯಗಳು ಇತಿಹಾಸ ರಚನೆಯಲ್ಲಿ ಬಹುಮುಖ್ಯ ಪಾತ್ರವಹಿಸಿವೆ. ನಾಣ್ಯಗಳಿಂದ ಒಂದು ನಾಡಿನ ವ್ಯವಹಾರದ ದಿಕ್ಕು&ದೆಸೆ ಅರಿಯಲು ಸಾಧ್ಯವಾಯಿತು. ಪ್ರಾಚಿನ ಕಾಲದಲ್ಲಿ ನಾಣ್ಯಗಳನ್ನು ಪರಿಚಯಿಸುವ ಮೊದಲು ವಸ್ತು ವಿನಿಮಯ ವ್ಯವಸ್ಥೆ ಇತ್ತು. ನಾಣ್ಯಗಳ ಪರಿಚಯದಿಂದ ಆರ್ಥಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಯಿತು. ಅಭಿವೃದ್ಧಿಯಲ್ಲಿ ಹೊಸ ಶಕೆ ಆರಂಭವಾಯಿತು. ನಾಡಿನ ಸಾಂಸತಿಕ ಚಹರೆಗಳನ್ನು ಅರಿಯಲು ನಾಣ್ಯಗಳು ಪ್ರಮುಖವಾದುದು. ವಿದ್ಯಾರ್ಥಿಗಳು ಈ ಪ್ರದರ್ಶನ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸದಾಶಿವ ಮುಗಳಿ ಮಾತನಾಡಿ, ದೇಶ&ವಿದೇಶ ಹಾಗೂ ಪ್ರಾಚಿನ ಕಾಲದ ನಾಣ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇವುಗಳನ್ನು ಅಂತರ್ಜಾಲದಲ್ಲಿ ನೋಡಬಹುದೇ ವಿನ@ ಪ್ರತ್ಯಕ್ಷವಾಗಿ ನೋಡಲು ಸಿಗುವುದು ಬಹು ಅಪರೂಪ. ಇಲ್ಲಿ ಒಟ್ಟು 110 ವಿವಿಧ ರಾಜಮನೆತನಗಳ ನಾಣ್ಯಗಳು ಮತ್ತು 224 ದೇಶದ ನೋಟುಗಳಿವೆ. ಅವು ಕ್ರಿಸ್ತ ಪೂರ್ವದಿಂದ ಇಲ್ಲಿಯವರೆಗಿನಗಳಾಗಿವೆ ಎಂದು ಮಾಹಿತಿ ನೀಡಿದರು.

ಇತಿಹಾಸ ಉಪನ್ಯಾಸಕಿ ಡಾ.ನೂತನ ದೇಸಾಯಿ ಸ್ವಾಗತಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ನಾಣ್ಯಗಳ ಪ್ರದರ್ಶನ ವೀಸಿದರು. ಭಾಗ್ಯಶ್ರೀ ಹೊನ್ನಕ್ಕನವರ ನಿರೂಪಿಸಿದರು. ಸಿದ್ಧಾರೂಢ ಮೇತ್ರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net