ನಾಣ್ಯಗಳ ಪ್ರದರ್ಶನ ಇಂದಿನಿಂದ

27Jaggu4
ಸುದ್ದಿಗೋಷ್ಠಿಯಲ್ಲಿ ನಾಣ್ಯಗಳ ಪ್ರದರ್ಶನದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ವಿನಯಕುಮಾರ ಬಾಳಿಕಾಯಿ, ಶಿರಿಶ್ ಮುತಾಲಿಕ ದೇಸಾಯಿ, ಅರುಣ ಕಾಮೂಳೆ, ಶೈಲಜಾ ಕರೋಶಿ ಇದ್ದರು.
Published on

ಬೆಳಗಾವಿ: ಇಂದಿನ ಯುವ ಪೀಳಿಗೆಗೆ ಹಳೆ ಇತಿಹಾಸ ಪರಿಚಯಿಸುವ ಉದ್ದೇಶದಿಂದ ಡಿ.28 ಹಾಗೂ 29ರಂದು ಮಹಾವೀರ ಭವನದಲ್ಲಿ ನಾಣ್ಯಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಆಫ್ ವೇಣುಗ್ರಾಮನ ಅಧ್ಯಕ್ಷ ವಿನಯಕುಮಾರ ಬಾಳಿಕಾಯಿ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೇ ನಾಣ್ಯಗಳ ಸಂಗ್ರಹಣೆ ಪ್ರದರ್ಶನಕ್ಕೆ ಈಗಾಗಲೇ ಶಾಲೆ-ಕಾಲೇಜುಗಳಿಗೆ ಉಚಿತ ಪಾಸ್ ವಿತರಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ರೋಟರಿ ಕ್ಲಬ್ ಆಫ್ ವೇಣುಗ್ರಾಮ, 25 ವರ್ಷದಿಂದ ಸಾಮಾಜಿಕ ಕಾರ್ಯ ಮಾಡಿಕೊಂಡು ಬಂದಿದೆ. ಸರ್ಕಾರಿ ಶಾಲೆಯಲ್ಲಿ ಮೂಲ ಸೌಕರ್ಯ ಕಲ್ಪಿಸಿಕೊಟ್ಟಿದೆ. ಫೆ.26ಕ್ಕೆ ರೋಟರಿ ಕ್ಲಬ್ ಆಫ್ ವೇಣುಗ್ರಾಮ ವತಿಯಿಂದ ಮ್ಯಾರಥಾನ್ ಆಯೋಜಿಸಲಾಗಿದೆ. ಅಲ್ಲಿ ಸಂಗ್ರಹವಾದ ಹಣವನ್ನು ಸಾಮಾಜಿಕ ಕಾರ್ಯಕ್ಕೆ ಬಳಸಿಕೊಳ್ಳುತ್ತೇವೆ ಎಂದರು. ಶಿರಿಶ್ ಮುತಾಲಿಕ ದೇಸಾಯಿ, ಅರುಣ ಕಾಮೂಳೆ, ಶೈಲಜಾ ಕರೋಶಿ, ಲತೇಶ ಪೋರವಾಲ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net