ನಾಣ್ಯದರ್ಶನ ಗತ ವೈಭವದ ಸಂಕೇತ ವಿದ್ಯಾ ಕಿಶೋರ್ ಬಾಗ್ಲೋಡಿ ಹೇಳಿಕೆ

mng---13 sep Balmata college
Published on


ಮಂಗಳೂರು: ಪ್ರಮುಖ ಪುರಾತತ್ವ ಮೂಲವಾದ ನಾಣ್ಯಗಳು ಭಾರತದ ಐತಿಹಾಸಿಕ ಚಿತ್ರಣವನ್ನು ನೀಡುವಲ್ಲಿ ಸಹಕಾರಿಯಾಗಿದೆ. ವಿನಿಮಯ ಮಾಧ್ಯಮವಾಗಿ ರಾಜ್ಯ,ಭಾಷೆ,ಆಡಳಿತ, ಧರ್ಮ ಹಾಗೂ ಆರ್ಥಿಕ ಸ್ಥಿತಿಯ ಕುರಿತು ಆಗಾಧವಾದ ವಿಷಯಗಳನ್ನು ಇವು ಅನಾವರಣಗೊಳಿಸುತ್ತದೆ ಎಂದು ಖ್ಯಾತ ನಾಣ್ಯ ಶಾಸ್ತ್ರಜ್ಞೆ ಹಾಗೂ ಅಂಚೆ ಚೀಟಿ ಸಂಗ್ರಹಕಾರೆ ವಿದ್ಯಾ ಕಿಶೋರ್ ಬಾಗ್ಲೋಡಿ ಅಭಿಪ್ರಾಯಪಟ್ಟರು.


ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಲ್ಮಠ, ಮಂಗಳೂರು ಇಲ್ಲಿನ ಇತಿಹಾಸ ವಿಭಾಗವು ಆಯೋಜಿಸಿದ ನಾಣ್ಯ ದರ್ಶನ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಪ್ರಾಚೀನ, ಮಧ್ಯಯುಗೀನ ಬಿಟ್ರಿಷ್ ಭಾರತ ಹಾಗೂ ಸ್ವಾತಂತ್ಯೋತ್ತರ ಭಾರತದ ನಾಣ್ಯಗಳ ಪ್ರದರ್ಶನದ ಮೂಲಕ ವಿದ್ಯಾರ್ಥಿನಿಯರಿಗೆ ಭಾರತದ ಸಾಂಸ್ಕೃತಿಕ ವೈಭವದ ಕುರಿತು ಇವರು.ಮಾಹಿತಿ ನೀಡಿದರು.


ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ ಬಾಳ ಮತ್ತು ಎಲ್ಲಾ ಶಿಕ್ಷಕ,ಶಿಕ್ಷಕೇತರರು ಉಪಸ್ಥಿತರಿದ್ದರು. ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾದ್ಯಾಪಕರಾದ ಡಾ ಶೈಲಾ ಕೆ.ಎನ್ ಕಾರ್ಯಕ್ರಮ ಆಯೋಜಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net