

ಮೂಡಿಗೆರೆ: ಸಾವಿರಾರು ಜನರಿಗೆ ಉದ್ಯೋಗ ದೊರಕಿಸಿದ ಸರಳ ವ್ಯಕ್ತಿತ್ವದ ಮಹಾ ಸಾಧಕ ವಿ.ಜಿ.ಸಿದ್ಧಾರ್ಥ ಹೆಗಡೆ ಅವರ ಸಂಸ್ಥೆ ನಷ್ಟಲಿದ್ದು, ಉಳ್ಳವರು ಸಂಸ್ಥೆಯೊಂದಿಗೆ ಕೈ ಜೋಡಿಸಿದರೆ ಮತ್ತೆ ಅವರ ಸಂಸ್ಥೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಆದಿಚುಂಚನಗಿರಿ ಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಶುಕ್ರವಾರ ಕುದ್ರೆಗುಂಡಿ ಎಬಿಸಿ ಕಾಫಿ ಎಸ್ಟೇಟ್ನ ಸಿದ್ಧಾರ್ಥವನದಲ್ಲಿ ನಿರ್ವಿುಸಿರುವ ದಿವಂಗತ ವಿ.ಜಿ.ಸಿದ್ಧಾರ್ಥ ಹೆಗಡೆ ಅವರ ಪುತ್ಥಳಿ ಅನಾವರಣ ಹಾಗೂ ಬುದ್ಧ ಪ್ರತಿಮೆ ಉದ್ಘಾಟಿಸಿದ ಆಶೀರ್ವಚನ ನೀಡಿದರು.
ಸಿದ್ಧಾರ್ಥ ಅವರು ಕಂಪನಿಯಿಂದ ದೇಶಕ್ಕೆ ಒಳ್ಳೆಯದಾಗಬೇಕು ಎಂಬ ಛಲದೊಂದಿಗೆ ಜೀವನದ ಕೊನೇ ದಿನದವರೆಗೂ ಅವಿರತವಾಗಿ ದುಡಿದಿದ್ದಾರೆ. ಅವರ ಕಂಪನಿಯಲ್ಲಿ ತರಬೇತಿ ಪಡೆದ ಯುವ ಸಮುದಾಯ ದೇಶ ವಿದೇಶದಲ್ಲಿ ನೆಲೆಸಿದ್ದಾರೆ. ಇಂದು ಆ ಯುವಕರು ಸ್ವಂತ ಉದ್ಯಮ ಸ್ಥಾಪಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಹೆಗ್ಗಳಿಗೆ ಸಿದ್ಧಾರ್ಥ ಅವರಿಗೆ ಸಲ್ಲಬೇಕು ಎಂದು ಹೇಳಿದರು.
ಫಿಶ್ ಮೋಣು, ಎಬಿಸಿ ಕಂಪನಿಯ ಕಿರಿಟಿ ಸಾವಂತ್, ಹಿರಿಯ ಕಾರ್ವಿುಕ ಸೋಮಯ್ಯ, ಕಾರ್ವಿುಕ ಮೇಲ್ವಿಚಾರಕ ಶ್ರೀಧರ, ಗುತ್ತಿಗೆದಾರ ಹಸೈನಾರ್ ಅವರನ್ನು ಸನ್ಮಾನಿಸಲಾಯಿತು.