

ಮೂಡಿಗೆರೆ: ಬ್ರೆಜಿಲ್ ದೇಶದಲ್ಲಿ ದೊಡ್ಡ ಗಾತ್ರದ ಯಂತ್ರಗಳನ್ನು ಉಪಯೋಗಿಸಿಕೊಂಡು ಕಾಫಿ ಕೃಷಿ ಮಾಡುತ್ತಿರುವುದರಿಂದ ಅಲ್ಲಿ ಕಾರ್ಮಿಕರ ಸಮಸ್ಯೆ ಇಲ್ಲ.ಭಾರತದಲ್ಲಿಯೂ ದೊಡ್ಡ ಯಂತ್ರಗಳನ್ನು ಉಪಯೋಗಿಸಿಕೊಂಡು ಕೃಷಿ ನಡೆಸಿದರೆ ಇಲ್ಲಿಯೂ ಕಾರ್ಮಿಕರ ಸಮಸ್ಯೆಯನ್ನು ನಿವಾರಿಸಬಹುದು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಎಚ್.ಟಿ.ಮೋಹನ್ ಕುಮಾರ್ ಹೇಳಿದರು.
ಸೆ.12ರಂದು ಲಂಡನ್‌ನಲ್ಲಿ ನಡೆದ ಇಂಟರ್ ನ್ಯಾಷನಲ್ ಕಾಫಿ ಆರ್ಗನೈಸೇಷನ್ ಸಭೆಯಲ್ಲಿ ಭಾಗವಹಿಸಿ ಭಾರತಕ್ಕೆ ವಾಪಾಸ್ಸಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬ್ರೆಜಿಲ್‌ನಲ್ಲಿ ಸಮತಟ್ಟು, ಎತ್ತರ ಮತ್ತು ಇಳಿಜಾರು ಜಮೀನಿನಲ್ಲಿ ಯಂತ್ರಗಳನ್ನು ಉಪಯೋಗಿಸಿ ಕೃಷಿ ಚಟುವಟಿಕೆ ನಡೆಸುತ್ತಾರೆ ಇದರಿಂದ ಅವರಿಗೆ ಕಾರ್ಮಿಕರ ಸಮಸ್ಯೆ ಇಲ್ಲವಾಗಿದೆ. ಇಂಟರ್ ನ್ಯಾಷನಲ್ ಕಾಫಿ ಆರ್ಗನೈಸೇಷನ್ ಸಭೆಯಲ್ಲಿ ವಿವಿಧ ದೇಶಗಲ್ಲಿ ನಡೆಸುತ್ತಿರುವ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಇಲ್ಲಿನ ಬೆಳೆಗಾರರಿಗೂ ಅದನ್ನು ತಿಳಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕೇಂದ್ರ ವಾಣಿಜ್ಯ ಇಲಾಖೆ ಹಿರಿಯ ಅಧಿಕಾರಿ ನೀರಜ್, ಇಂಡಿಯನ್ ಎಂಬೆಸಿ ಅಧಿಕಾರಿಗಳಾದ ನಿಧಿಮಣಿ ತ್ರಿಪತಿ, ಹಾಗೂ ಶ್ರೀರಂಜನಿ ಕನಗವೆಲ್ ಹಾಗೂ ಕಾಫಿ ಬೆಳೆಯುವ 65 ದೇಶಗಳಿಂದ ಕಾಫಿ ಬೆಳಗಾರ ಪ್ರತಿನಿಧಿಗಳು ಭಾಗವಹಿಸಿದ್ದರು.