ಕಾಫಿ ಸೇವಿಸುವ ಜನರ ಸಂಖ್ಯೆ ಹೆಚ್ಚಾಗಲಿ

1ss1coffee peya
Published on

ಮಂಡಳಿಯ ಹಿರಿಯ ವಿಸ್ತರಣಾಧಿಕಾರಿ ರಂಜಿತ್ ಕುಮಾರ್ ಸಲಹೆ

  • ಶನಿವಾರಸಂತೆ : ಭಾರತದದಲ್ಲಿ ಬೆಳೆಯುತ್ತಿರುವ ಉತ್ಕೃಷ್ಟ ಗುಣಮಟ್ಟದ ಕಾಫಿ ಉತ್ಪನ್ನ ಶೇ 70ರಷ್ಟು ವಿದೇಶಕ್ಕೆ ರಫ್ತಾಗುತ್ತಿರುವ ಸಂದರ್ಭದಲ್ಲಿ ಕಾಫಿ ಸೇವಿಸುವ ಜನರ ಸಂಖ್ಯೆ ನಮ್ಮ ನಾಡಿನಲ್ಲೂ ಹೆಚ್ಚಾಗಬೇಕು ಎಂದು ಸೋಮವಾರಪೇಟೆ ಕಾಫಿ ಮಂಡಳಿಯ ಹಿರಿಯ ವಿಸ್ತರಣಾಧಿಕಾರಿ ರಂಜಿತ್ ಕುಮಾರ್ ಹೇಳಿದರು.
    ಶನಿವಾರಸಂತೆ ಕೆಆರ್‌ಸಿ ವೃತ್ತದಲ್ಲಿ ಕಾಫಿ ಮಂಡಳಿ ಸೋಮವಾರಪೇಟೆ ಹಾಗೂ ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ವಿಶ್ವದಲ್ಲಿ ಉತ್ಕೃಷ್ಟ ಗುಣಮಟ್ಟದ ಕಾಫಿ ಬೆಳೆ ಪಡೆಯುವ ದೇಶಗಳಲ್ಲಿ ಭಾರತವೂ ಒಂದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಾಫಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಕಾಫಿ ಬೆಳೆಯುತ್ತಿರುವ ನಾಡಿನಲ್ಲೇ ಕಾಫಿ ಸೇವಿಸುವವರ ಸಂಖ್ಯೆ ಕಡಿಮೆ ಆಗುತ್ತಿದೆ ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಸೂಕ್ತ ಪ್ರಚಾರ ಕಾರ್ಯಗಳ ಮೂಲಕ ಜಾಗೃತಿ ಮೂಡಿಸಬೇಕಿದೆ ಎಂದರು. ಹಿತ- ಮಿತವಾದ ಚೌಕಟ್ಟಿನಲ್ಲಿ ಕಾಫಿಯನ್ನು ಆರೋಗ್ಯಕರ ಪೇಯ ಎಂದೇ ಪರಿಗಣಿಸಲಾಗಿದೆ.
    ಕಾಫಿ ಮಾರುಕಟ್ಟೆ ಇತ್ತೀಚಿನ ದಶಕದಲ್ಲಿ ಬೃಹತ್ ಉದ್ದಿಮೆಯಾಗಿ ಬೆಳೆಯುತ್ತಿದೆ. ಬೆಳೆಗಾರರೂ ಈ ಮಟ್ಟದ ಗುಣ ನಿಯಂತ್ರಣಕ್ಕೆ ಸ್ಪಂದಿಸಿ ಬೆಳೆ ಬೆಳೆಯಬೇಕಾಗಿದೆ ಎಂದು ರಂಜಿತ್ ಕುಮಾರ್ ಸಲಹೆ ನೀಡಿದರು.
    ಉತ್ಸವದಲ್ಲಿ ಭಾಗವಹಿಸಿ: ಅ. 6 ಮತ್ತು 7 ರಂದು ಮಡಿಕೇರಿಯಲ್ಲಿ ನಡೆಯುವ ದಸರಾ ಉತ್ಸವದಲ್ಲಿ ಕಾಫಿ ಮಂಡಳಿಯಿಂದ ‘ಕಾಫಿ ಉತ್ಸವ’ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಕಾಫಿ ಬೆಳೆಗಾರರೆಲ್ಲರೂ ಪಾಲ್ಗೊಂಡು ಕಾಫಿ ಉತ್ಪನ್ನವನ್ನು ಪ್ರಚಾರಗೊಳಿಸಲು ಮುಂದಾಗಬೇಕು ಎಂದು ರಂಜಿತ್ ಕುಮಾರ್ ಮನವಿ ಮಾಡಿದರು.
    ಬೆಳೆಗಾರರೂ ಸ್ಪಂದಿಸಿ: ಕಾಫಿ ಮಂಡಳಿಯ ಮತ್ತೊಬ್ಬ ಹಿರಿಯ ವಿಸ್ತರಣಾಧಿಕಾರಿ ಲಕ್ಷ್ಮಿ ೀಕಾಂತ್ ಮಾತನಾಡಿ, ವಿಶ್ವ ಮಟ್ಟದಲ್ಲಿ ಮಾರುಕಟ್ಟೆ ಹೊಂದಿರುವ ಹಿನ್ನೆಲೆಯಲ್ಲಿ ಗುಣಮಟ್ಟದ ಕಾಫಿ ಬೀಜ ಬೆಳೆಯುವಂತೆ ಬೆಳೆಗಾರರನ್ನು ಭಾರತೀಯ ಕಾಫಿ ಮಂಡಳಿ ಪ್ರೋತ್ಸಾಹಿಸುತ್ತಿದೆ ಎಂದರು.
    ರೋಟರಿ ಕ್ಲಬ್ ಸದಸ್ಯ ಚಂದ್ರಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಲಬ್ ಅಧ್ಯಕ್ಷ ವಿ.ಎಲ್.ವರ್ಷಿತ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಪದಾಧಿಕಾರಿಗಳಾದ ಶ್ವೇತಾ ವಸಂತ್, ಕಾಫಿ ಬೆಳೆಗಾರರಾದ ಎಚ್.ವಿ.ದಿವಾಕರ್, ಕೆ.ಸಿ.ಅಶೋಕ್ ಮುಂತಾದವರಿದ್ದರು. ದಿನದ ಅಂಗವಾಗಿ ಸಾರ್ವಜನಿಕರಿಗೆ ಕಾಫಿ ಪೇಯವನ್ನು ವಿತರಿಸಲಾಯಿತು

ಪೋಟೋ1 )
ಶನಿವಾರಸಂತೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯಲ್ಲಿ ಕಾಫಿ ಪೇಯ ಸೇವಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಕಾಫಿ ಮಂಡಳಿ ಹಿರಿಯ ಅಧಿಕಾರಿಗಳಾದ ರಂಜಿತ್‌ಕುಮಾರ್, ಲಕ್ಷ್ಮೀಕಾಂತ್,
ರೋಟರಿ ಕ್ಲಬ್ ಅಧ್ಯಕ್ಷ ವರ್ಷಿತ್, ಕಾರ್ಯದರ್ಶಿ ಶ್ವೇತಾ ವಸಂತ್ ಇತರರು ಹಾಜರಿದ್ದರು.

  • ಕಾರ್ಯಕ್ರಮದಲ್ಲಿ ಹಾಜರಿದ್ದ ರೋಟರಿ ಸದಸ್ಯರು ಮತ್ತು ಬೆಳೆಗಾರರು.
  • ಮಂಡಳಿ ಅಧಿಕರಿ ಲಕ್ಷ್ಮಿಕಾಂತ್ ಮಾತು.
    3 ಬೆಳೆಗಾರರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net