

ಮಡಿಕೇರಿ:
ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಸೆ. 24ರ ಬುಧವಾರ ಆಯೋಜಿಸಲಾಗಿರುವ ಎರಡನೇ ವರ್ಷದ ಕಾಫಿ ದಸರಾ ಸಂದರ್ಭ ಕಾಫಿಯಿಂದ ತಯಾರಿಸಲ್ಪಡುವ ವೈವಿಧ್ಯಮಯ ಖಾದ್ಯಗಳ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕಾಫಿ ದಸರಾ ಸಮಿತಿ ಸಂಚಾಲಕ ಹೆಚ್.ಟಿ. ಅನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಫಿಯ ಮಹತ್ವ ತಿಳಿಸಲು ಮಾಹಿತಿಯುಕ್ತ ಸ್ಪರ್ಧೆಯನ್ನು ಸೆ.24 ರಂದು ಬುಧವಾರ ಬೆಳಗ್ಗೆ 10 ಗಂಟೆಯಿAದ 12 ಗಂಟೆಯವರೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ. ಕಾಫಿ ಫ್ಲೆವರ್ ಕೇಕ್ ವಿಭಾಗ, ಕಾಫಿ ಫ್ಲೆವರ್ ಕಪ್ ಕೇಕ್ ವಿಭಾಗ, ಕಾಫಿ ಫ್ಲೆವರ್ ಬ್ರೌನಿ ವಿಭಾಗ, ಕಾಫಿ ಫ್ಲೆವರ್ ಬಿಸ್ಕತ್ ವಿಭಾಗ, ಕಾಫಿ ಫ್ಲೆವರ್ ಪುಡ್ಡಿಂಗ್ ವಿಭಾಗ, ವಿಭಿನ್ನ ರುಚಿಯಿರುವ ಕಾಫಿ ಪಾನೀಯ ವಿಭಾಗ ಮತ್ತು ಕಾಫಿ ಫ್ಲೇವರ್ ಚಾಕಲೇಟ್ ವಿಭಾಗ ಒಳಗೊಂಡAತೆ 7 ವಿಭಾಗಗಳಲ್ಲಿ ಸ್ಪರ್ಧೆಗಳು ಆಯೋಜಿತವಾಗಿದೆ.
ಸೆಪ್ಟೆಂಬರ್ 22 ರೊಳಗಾಗಿ ಸ್ಪರ್ಧಿಗಳು ತಮ್ಮ ಹೆಸರು ನೋಂದಾಯಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.