ಬೆಳೆಗಾರರ ಸಂಕಷ್ಟಕ್ಕೆ ಸ್ಪಂಸದ ಕಾಫಿ ಮಂಡಳಿ, ಕಾಫಿ ಮಂಡಳಿ ಸಂಪರ್ಕಾಧಿಕಾರಿ ಕಚೇರಿಗೆ ಬೀಗ

web 3
Published on

ಮೂಡಿಗೆರೆ: ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ಕಾಫಿ ಮಂಡಳಿ ಬೆಳೆಗಾರರ ನೆರವಿಗೆ ಧಾವಿಸುತ್ತಿಲ್ಲ. ಪಟ್ಟಣದಲ್ಲಿರುವ ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿಗಳ ಕಚೇರಿಯೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಾಲೂಕು ರೈತ ಸಂಘದ ಮಾಜಿ ಕಾರ್ಯದರ್ಶಿಡಿ.ಎಸ್.ರಮೇಶ್​ಗೌಡ ದೂರಿದ್ದಾರೆ.

4 ವರ್ಷದ ಹಿಂದೆ ಬೆಳೆಗಾರರಿಗೆ ಪಂಪ್​ಸೆಟ್, ಕಾಫಿ ದಾಸ್ತಾನು ಮಾಡಲು ಗೋಡಾನು ನಿರ್ವಣಕ್ಕೆ ಅನುದಾನ, ಕಾಫಿ ಒಣಗಿಸಲು ಸಿಮೆಂಟ್ ಕಣ, ಸ್ಪಿಂಕ್ಲರ್​ಸೆಟ್​ಗೆ ಸಹಾಯಧನ, ಪಲ್ಪರ್​ಯುಂತ್ರ, ಕಾಫಿ ಸಂಸ್ಕರಣ ಯಂತ್ರ ಸಹಿತ ಹಲವು ಯೋಜನೆಗಳನ್ನು ನೀಡಲಾಗುತ್ತಿತ್ತು. ಆದರೆ ಈಗ ಎರಡು ರಿಂಗ್ ಬಾವಿ ಹಾಗೂ ಒಂದು ಕೆರೆ ನಿರ್ವಣಕ್ಕೆ ಅನುದಾನ ಹೊರತುಪಡಿಸಿದರೆ ಯಾವುದೇ ಯೋಜನೆಗಳಿಲ್ಲ. ರಾಷ್ಟ್ರೀಕೃತ ಬ್ಯಾಂಕ್​ನ ಸಾಲ ಮನ್ನಾ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಬೆಳೆಗಾರರಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಸೌಲಭ್ಯದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

5 ವರ್ಷದಿಂದ ಬೆಳೆಗಾರರಿಗೆ ಸಹಾಯಧನ ನೀಡಿಲ್ಲ. ಅತಿವೃಷ್ಟಿಯಿಂದ ಬೆಳೆಗಾರರು ಸಂಕಷ್ಟಕ್ಕೆ ಒಳಗಾದರೂ ಮಂಡಳಿ ನೆರವಿಗೆ ಬಂದಿಲ್ಲ. ಏಪ್ರಿಲ್​ನಿಂದ ಮಂಡಳಿಗೆ ಹೊಸ ಯೋಜನೆಗಳು ಸರ್ಕಾರದಿಂದ ಪ್ರಾರಂಭಗೊಳ್ಳಲಿದೆ. ಸಂಸದೆ ಶೊಭಾ ಕರಂದ್ಲಾಜೆ, ಶಾಸಕ ಎಂ.ಪಿ.ಕುಮಾರಸ್ವಾಮಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ರೈತರಿಗೆ ಅನುಕೂಲವಾಗುವ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ವಿಮೆ ವ್ಯಾಪ್ತಿಗೆ ಕಾಫಿ ಬೆಳೆಗಾರರನ್ನು ಸೇರಿಸಬೇಕು. ಕೇಂದ್ರ ಸರ್ಕಾರ ಕಾಫಿ ಮಂಡಳಿಯನ್ನು ಪುನಶ್ಚೇತನಗೊಳಿಸಿ ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net