ಕಾಫಿ, ಅಡಕೆ ತೋಟಗಳು ಜಲಾವೃತ

22ald-1
Published on

ಆಲ್ದೂರು: ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಮಲೆನಾಡಿನಲ್ಲಿ ಕಾಫಿ ತೋಟ, ರಸ್ತೆಗಳು ಕೊಚ್ಚಿ ಹೋಗಿವೆ. ಹಳ್ಳ ಹಾಗೂ ನದಿಗಳ ಪಕ್ಕದಲ್ಲಿರುವ ಕಾಫಿ,ಅಡಕೆ ತೋಟಗಳಿಗೆ ನೀರು ನುಗ್ಗಿವೆ. ಬನ್ನೂರು ಹಳ್ಳದ ನೀರು ಉಕ್ಕಿ ಹರಿದ ಪರಿಣಾಮ ಧರ್ಮೆಗೌಡ ಅವರ ಕಾಫಿ ತೋಟಗಳಿಗೆ ನೀರು ನುಗ್ಗಿ ಅಡಕೆ ಮರಗಳು, ಕಾಫಿ ಗಿಡಗಳು ಕೊಚ್ಚಿ ಹೋಗಿವೆ. ಇವರ ಪಕ್ಕದಲ್ಲಿರುವ ಸುರೇಶ್ ಅವರ ಭತ್ತದ ಗದ್ದೆ ಹಾಗೂ ಕಾಫಿ ತೋಟಗಳು ಜಲಾವೃತವಾಗಿವೆ. ಚಿಕ್ಕಮಾಗರವಳ್ಳಿ, ದೊಡ್ಡಮಾಗರವಳ್ಳಿ ಗ್ರಾಮದಲ್ಲಿ ಒಂದು ಗಂಟೆಯಲ್ಲಿ 4 ಇಂಚು ಮಳೆಯಾಗಿದೆ.

ಆಲ್ದೂರು ಗ್ರಾಪಂ ವ್ಯಾಪ್ತಿಯ ಗುಪ್ತಶೆಟ್ಟಿ ಹಳ್ಳಿ, ಕ್ಯಾಜಿಗೆ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿದ್ದು ಈ ಎರಡು ಗ್ರಾಮಗಳ ಜನರು ಪಟ್ಟಣಗಳಿಗೆ ತೆರಳು ಪರ್ಯಾಯ ರಸ್ತೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಆಲ್ದೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿರುವುದರಿಂದ ಜನತೆ ಪರದಾಡುವ ಸ್ಥತಿ ನಿರ್ಮಾಣವಾಗಿದೆ.

ಈ ಸ್ಥಳಕ್ಕೆ ಮಂಗಳವಾರ ಜಿಪಂ ಎಇಇ ಚೇತನ್ ಹಾಗೂ ಜೆಇ ಸಂತೋಷ್ ಕಾಮತ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ನಾಳೆಯಿಂದ ಸೇತುವೆಕಾಮಗಾರಿ ಆರಂಭಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿದರು.

ಆಲ್ದೂರು ಗ್ರಾಪಂ ಪ್ರಭಾರ ಅಧ್ಯಕ್ಷ ಕೌಷಿಕ್, ಸದಸ್ಯರಾದ ನವರಾಜ್,ಪ್ರತಿಭಾ, ಗೋಪಾಲ್, ಗ್ರಾಪಂ ಮಾಜಿ ಸದಸ್ಯ ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net