ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಂಘದಲ್ಲಿ ಬಿಜೆಪಿ ಬೆಂಬಲಿಗರ ಜಯ

coffee
Published on

ಮಡಿಕೇರಿ:

ಜಿಲ್ಲೆಯ ಪ್ರತಿಷ್ಠಿತ ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಎಲ್ಲಾ 15 ನಿರ್ದೇಶಕ ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆದ್ದುಕೊಂಡಿದ್ದಾರೆ. ಫೆ.16ಕ್ಕೆ ಚುನಾವಣೆ ನಡೆದಿತ್ತಾದರೂ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಣೆಗೆ ಉಚ್ಛನ್ಯಾಯಾಲಯದ ತಡೆಯಾಜ್ಞೆ ಇದ್ದ ಕಾರಣ ಅಂದು ಫಲಿತಾಂಶ ಪ್ರಕಟ ಆಗಿರಲಿಲ್ಲ. ಇದೀಗ ಸಂಘ ನ್ಯಾಯಾಲಯದಿಂದ ಆದೇಶ ಪಡೆದುಕೊಂಡು ಶುಕ್ರವಾರ (ಏ.11) ಚುನಾವಣಾ ಫಲಿತಾಂಶ ಪ್ರಕಟಿಸಿದೆ.

11 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಉಳಿದ 4 ನಿರ್ದೇಶಕ ಸ್ಥಾನಗಳಿಗೆ 8 ಮಂದಿ ನಾಮಪತ್ರ ಸಲ್ಲಿಸಿದ್ದರಿಂದ 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಮುದ್ದಂಡ ಬಿ. ದೇವಯ್ಯ, ನಾಪಂಡ ರವಿ ಕಾಳಪ್ಪ, ಚೆಟ್ಟಿಮಾಡ ಪ್ರಶಾಂತ್, ಹಾಗೂ ಬಿ.ಎ. ರಮೇಶ್ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಉಪನಿಬಂಧಕಿ ಶೈಲಜಾ ಘೋಷಿಸಿದರು.

ಬಿಜೆಪಿ ಬೆಂಬಲಿತ ಮಾಚಿಮಂಡ ಸುವಿನ್ ಗಣಪತಿ, ಕಾಕೂರು ಎಂ. ಸಂದೀಪ್, ಸುರೇಶ್, ರಾಬಿನ್ ದೇವಯ್ಯ, ಗೌತಮ್, ಎಸ್.ಪಿ. ಪೊನ್ನಪ್ಪ, ಎಸ್. ಮಹೇಶ್, ಪಾಡಿಯಮ್ಮಂಡ ಮಹೇಶ್, ಡಿ.ಯು. ವರದರಾಜ್ ಅರಸ್, ಕಡ್ಲೇರ ತುಳಸಿ ಮೋಹನ್, ಚೆಟ್ರಂಡ ಲೀಲಾ ಮೇದಪ್ಪ ಅವಿರೋಧವಾಗಿ ಆಯ್ಕೆ ಆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net