ಸಿಡಿಲಬ್ಬರಕ್ಕೆ ಹೊತ್ತಿ ಉರಿದ ತೆಂಗಿನ ಮರ

LXR BENKI
Published on

ಲಕ್ಷೆ್ಮೕಶ್ವರ: ಪಟ್ಟಣ ಸೇರಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಸೋಮವಾರ ಸಂಜೆ ಗುಡುಗು- ಸಿಡಿಲಬ್ಬರದೊಂದಿಗೆ ಸಣ್ಣ ಮಳೆ ಸುರಿದು, ಕಾದು ಕಾವಲಿಯಂತಾಗಿದ್ದ ಇಳೆಯನ್ನು ತಂಪಾಗಿಸಿತು.

ಜೋರು ಗಾಳಿ, ಗುಡುಗು-ಸಿಡಿಲಬ್ಬರ ಜನರನ್ನು ಬೆಚ್ಚಿ ಬೀಳಿಸಿತ್ತು. ಪಟ್ಟಣದ ಸೋಮೇಶ್ವರ ದೇವಸ್ಥಾನದ ತೇರಿನ ಮನೆ ಹತ್ತಿರದ ಇಟಗಿ ಬಸವೇಶ್ವರ ದೇವಸ್ಥಾನ ಮುಂಭಾಗದ ತೆಂಗಿನಮರಕ್ಕೆ ಸಿಡಿಲು ಬಡಿದು ತೆಂಗಿನ ಮರದಲ್ಲಿ ಬೆಂಕಿ ಹೊತ್ತಿ ಉರಿಯಿತು.

ಮರದ ಕೆಳಗೆ ಮೇವಿನ ಬಣಣೆ ಸಂಗ್ರಹಿಸಿದ್ದ ರೈತರು ಆತಂಕಕ್ಕೀಡಾಗಿದ್ದರು. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದರು. ಏಕಾಏಕಿ ಪ್ರಾರಂಭವಾದ ಮಳೆಯ ರಕ್ಷಣೆಯಿಂದ ಹೊಟ್ಟು-ಮೇವಿನ ರಕ್ಷಣೆಗಾಗಿ ರೈತರು ಪರದಾಡಿದರು.

ಪಟ್ಟಣದ ಮಾರುಕಟ್ಟೆಯಲ್ಲಿ ಬೀದಿ ಬದಿಯ ವ್ಯಾಪಾರಸ್ಥರು, ಎಪಿಎಂಸಿಯಲ್ಲಿ ಫಸಲು ರಕ್ಷಿಸಲು ರೈತರು, ವ್ಯಾಪಾರಸ್ಥರು ಪರದಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net