ತೆಂಗಿನಕಾಯಿ ಕಳ್ಳನ ತಲೆಯಲ್ಲಿ ಕುಳಿತಿತ್ತು ಸಾವು..

coconut
Published on

ಚನ್ನಗಿರಿ: ತೆಂಗಿನ ಕಾಯಿ ಕದಿಯಲು ಬಂದಿದ್ದ ಕಳ್ಳನ ತಲೆಗೆ ತೆಂಗಿನ ಮಟ್ಟೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆಂಬ ಆರೋಪದಡಿ ತೋಟದ ಮಾಲೀಕ ಕುಬೇಂದ್ರಪ್ಪ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಕುಮಾರನಹಳ್ಳಿ ಗ್ರಾಮದ ಮಹಾಲಿಂಗಪ್ಪ (55) ಕೊಲೆಯಾದ ವ್ಯಕ್ತಿ. ಈತ ಎಕ್ಕೆಗೊಂದಿ ಗ್ರಾಮದ ಕುಬೇಂದ್ರಪ್ಪ ಎಂಬುವರ ತೋಟದಲ್ಲಿ ತೆಂಗಿನಕಾಯಿ ಕದ್ದಿದ್ದಾನೆ. ಇದೇ ವೇಳೆ ಮಾಲೀಕ ಕುಬೇಂದ್ರಪ್ಪನೂ ಅಲ್ಲಿಗೆ ಹೋಗಿದ್ದಾರೆ. ಇದನ್ನೂ ಓದಿಅಭಿಮಾನಿಗಳ ಹಾರೈಕೆಗೆ ಸಿಕ್ಕಿತು ಫಲ: ಎಸ್​ಪಿಬಿ ಚೇತರಿಕೆ- ಮಗನಿಂದ ಮಾಹಿತಿ

ಈತನನ್ನು ಕಂಡ ಮಹಾಲಿಂಗಪ್ಪ ಓಡಲು ಯತ್ನಿಸಿದಾಗ ತೋಟದ ಮಾಲೀಕ ಕೈಗೆ ಸಿಕ್ಕ ತೆಂಗಿನಮಟ್ಟಿಯಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ. ಇದರಿಂದ ಆತ ಪ್ರಜ್ಞೆತಪ್ಪಿ ಬಿದ್ದಿದ್ದಾನೆ. ತಕ್ಷಣ ದಾವಣಗೆರೆ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net