ತೆಂಗಿನಕಾಯಿ ಹಿಡಿಯುವ ಸಂಖ್ಯೆ ಹೆಚ್ಚಳ: ದರ ಏರಿಕೆ ಬೆನ್ನಲ್ಲೇ ಪ್ರವಾಹ ಲೆಕ್ಕಿಸದೆ ಸಾಹಸ

New Project (17)
Published on

ಉಪ್ಪಿನಂಗಡಿ: ತೆಂಗಿನಕಾಯಿಗೆ ಬೆಲೆ ಏರಿಕೆ ಬೆನ್ನಲ್ಲೇ ನದಿ ನೀರಿನಲ್ಲಿ ಹರಿದು ಬರುತ್ತಿರುವ ತೆಂಗಿನಕಾಯಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ದಿನಂಪ್ರತಿ ಅಪಾಯಕ್ಕೆ ಮೈಯೊಡ್ಡಿ ತೆಂಗಿನಕಾಯಿಯನ್ನು ಸಂಗ್ರಹಿಸುತ್ತಿರುವ ದೃಶ್ಯ ಉಪ್ಪಿನಂಗಡಿ ಕುಮಾರಧಾರಾ ನದಿ ಸೇತುವೆ ಬಳಿ ಕಾಣಿಸುತ್ತಿದೆ.

ಸೇತುವೆಯ ಕೆಳಭಾಗದಲ್ಲಿ ನದಿ ನೀರಿನ ಪ್ರವಾಹದ ವೇಗಕ್ಕೆ ಸಿಲುಕಿ ಬರುತ್ತಿರುವ ತೆಂಗಿನಕಾಯಿ, ಪ್ಲ್ಯಾಸ್ಟಿಕ್ ಇನ್ನಿತರ ಕಸಕಡ್ಡಿಗಳು ಸೇತುವೆಯ ಕೆಳಭಾಗದಲ್ಲಿ ಸಂಗ್ರಹಗೊಂಡಂತಿರುತ್ತದೆ. ಇದನ್ನು ನಾಜೂಕಾಗಿ ನದಿ ಬದಿಗೆ ಸರಿಯುವಂತೆ ಮಾಡಿ ಸಂಗ್ರಹಿಸುತ್ತಿರುವ ಯುವಕರು ದಿನಂಪ್ರತಿ ನೂರಕ್ಕೂ ಹೆಚ್ಚು ತೆಂಗಿನಕಾಯಿಯನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಗಗನಕ್ಕೇರಿರುವ ತೆಂಗಿನಕಾಯಿಯ ದರದ ಹಿನ್ನೆಲೆಯಲ್ಲಿ ಅಪಾಯವನ್ನು ಲೆಕ್ಕಿಸದೆ ದಿನದ ಬೆಳಕು ಹರಿಯುತ್ತಿದ್ದಂತೆಯೇ ನದಿ ಬದಿಗೆ ಆಗಮಿಸುವ ಈ ಮಂದಿ ದೊರೆತ ತೆಂಗಿನಕಾಯಿಯ ಚಿಪ್ಪೆಯನ್ನು ಅಲ್ಲಿಯೇ ಸುಲಿದು ಮಾರಾಟ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net