

ಬಾಳೆಹೊನ್ನೂರು: ವಿಶ್ವದಲ್ಲಿ ತೆಂಗು ಎಲ್ಲಾ ವಿಭಾಗದಲ್ಲೂ ಮಹತ್ತರ ಸ್ಥಾನ ಪಡೆದುಕೊಂಡಿದೆ ಎಂದು ಎನ್.ಆರ್.ಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚೈತನ್ಯ ವೆಂಕಿ ಹೇಳಿದರು.
ಪಟ್ಟಣದ ಮಲೆನಾಡಿನ ಒಳ್ಳೆಯ ಮನಸ್ಸುಗಳ ಒಕ್ಕೂಟ ಬಸ್‌ನಿಲ್ದಾಣದಲ್ಲಿ ಆಯೋಜಿಸಿದ್ದ ವಿಶ್ವ ತೆಂಗುದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಸೆಪ್ಟೆಂಬರ್ 2ನ್ನು ವಿಶ್ವ ತೆಂಗು ದಿನವನ್ನಾಗಿ ವಿಶ್ವದಲ್ಲಿ ಆಚರಿಸಲಾಗುತ್ತಿದೆ ಇದು ಹಲವರ ಗಮನಕ್ಕೆ ಬಂದಿಲ್ಲ. ತೆಂಗು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ತೆಂಗಿನ ಸಸಿಯಿಂದ ಹಿಡಿದು ಅದು ಮರವಾಗುವವರೆಗೆ ಪ್ರತಿ ಹಂತದಲ್ಲಿಯೂ ನಮ್ಮ ಜೀವನಕ್ಕೆ ಉಪಯುಕ್ತವಾಗಿದೆ ಎಂದು ತಿಳಿಸಿದರು.
ಇಂಗು ಮತ್ತು ತೆಂಗು ಇವೆರಡಿದ್ದರೆ ಮಂಗನೂ ಅಡುಗೆ ಮಾಡಬಹುದು ಎಂಬ ಗಾದೆ ಮಾತಿನಂತೆ ಅಡುಗೆ ತಯಾರಿಯಲ್ಲಿ ತೆಂಗಿನ ಮಹತ್ವ ತಿಳಿಯುತ್ತದೆ. ಪ್ರಕೃತಿಯಲ್ಲಿ ಬಹುಮುಖ್ಯ ಉತ್ಪನ್ನಗಳಲ್ಲಿ ತೆಂಗು ಒಂದಾಗಿದೆ. ತೆಂಗು ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೇ, ಆರ್ಥಿಕವಾಗಿಯೂ ತನ್ನದೇ ಆದ ಸ್ಥಾನಮಾನ ಪಡೆದುಕೊಂಡಿದೆ. ಧಾರ್ಮಿಕ ವಿಧಿ ವಿಧಾನಗಳಲ್ಲಂತೂ ತೆಂಗು ಇಲ್ಲದೇ ಯಾವುದೇ ಕಾರ್ಯವೂ ಮುನ್ನಡೆಯುವುದಿಲ್ಲ ಎಂದರು.
ತಾಲೂಕು ಕಸಾಪ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ಶಿಕ್ಷಕ ಸುರೇಂದ್ರ, ಕೆ.ಎಂ.ರಾಘವೇಂದ್ರ, ಜೇಸಿಐ ಪೂರ್ವಾಧ್ಯಕ್ಷ ಸೈಯ್ಯದ್ ಾಜಿಲ್ ಹುಸೇನ್, ಸುಧಾಕರ್, ಎಚ್.ಗೋಪಾಲ್, ಪ್ರಮುಖರಾದ ಬಿ.ಎಸ್.ನಾಗರಾಜ್‌ಭಟ್, ಜಯಶೀಲ್, ವಿ.ರೋಹಿತ್ ಪೂಜಾರಿ, ಅಶೋಕ್, ಲ್ಯಾನ್ಸಿ ಪಿಂಟೋ, ರಾಜಣ್ಣ, ಚೇತನ್‌ಕುಮಾರ್ ಮತ್ತಿತರರು ಹಾಜರಿದ್ದರು.