ಕೋಳಿ ಅಂಕಕ್ಕೆ ಅನುಮತಿ ನೀಡಲು ಒತ್ತಾಯ

cccccccccc
Published on



ಮಂಗಳೂರು : ತುಳುನಾಡಿನಲ್ಲಿ ದೈವಾರಾಧನೆ,ಭೂತಾರಾಧನೆ,ಕಂಬಳದ ಜತೆ ನಡೆಯುತ್ತಿದ್ದ ಜೂಜು ರಹಿತ ಕೋಳಿ ಅಂಕ ಆಚರಿಸಲು ಅನುಮತಿ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಉಡುಪಿ ಜಿಲ್ಲೆಯ ಕೆಡಿಪಿ ಸಭೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಅವರನ್ನು ಒತ್ತಾಯಿಸಿದರು. ಕೋಳಿ ಅಂಕ ತುಳುನಾಡಿನ ಸಾಂಪ್ರದಾಯಿಕ ಆಚರಣೆಯಾಗಿದೆ. ವರ್ಷಂಪ್ರತಿಯಾಗಿ ನಡೆಯುವ ಕೋಳಿ ಅಂಕಗಳಿಗೆ ಅನುಮತಿ ನೀಡಬೇಕೆಂದು ಅವರು ವಿನಂತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net