ಬೃಹತ್ ಕೊಳಕ ಮಂಡಲವನ್ನೇ ನುಂಗಿದ ನಾಗರಹಾವು; ಕೆಲವೇ ಕ್ಷಣಗಳಲ್ಲಿ ಕಣ್ಮರೆ..

1280282
Published on

ಚಿತ್ರದುರ್ಗ: ನಾಗರಹಾವು ಇಲಿ-ಹೆಗ್ಗಣ ಮುಂತಾದವುಗಳನ್ನು ನುಂಗುವುದು ಸಾಮಾನ್ಯ. ಆದರೆ ಅದು ಇತರ ದೊಡ್ಡ ಹಾವುಗಳನ್ನು ನುಂಗುವುದು ಅತ್ಯಪರೂಪ. ಅದಾಗ್ಯೂ ಇಲ್ಲೊಂದು ಕಡೆ ದೊಡ್ಡ ಕೊಳಕ ಮಂಡಲವನ್ನೇ ನಾಗರಹಾವೊಂದು ನುಂಗಿಬಿಟ್ಟಿದೆ.

ಚಿತ್ರದುರ್ಗದ ಸಾಂತ್ವನ ಕೇಂದ್ರದ ಬಳಿ ಸೋಮವಾರ ಈ ಅತ್ಯಂತ ಅಪರೂಪದ ಘಟನೆ ಕಂಡುಬಂದಿದೆ. ಒಂದು ದೊಡ್ಡ ಕೊಳಕು ಮಂಡಲ ಹಾವನ್ನೇ ಈ ನಾಗರ ಹಾವು ನುಂಗುತ್ತಿರುವುದನ್ನು ಕಂಡ ಸ್ಥಳೀಯರು ನಿಬ್ಬೆರಗಾಗಿದ್ದಾರೆ.

ಸುಮಾರು ಹನ್ನೆರಡು ಅಡಿ ಇದ್ದ ಈ ನಾಗರಹಾವು ದೊಡ್ಡ ಕೊಳಕು ಮಂಡಲ ಹಾವನ್ನು ಕೆಲವೇ ನಿಮಿಷಗಳಲ್ಲಿ ನುಂಗಿದ್ದಷ್ಟೇ ಅಲ್ಲದೆ, ಅಷ್ಟು ದೊಡ್ಡ ಹಾವನ್ನು ಸೇವಿಸಿದ ಬಳಿಕವೂ ಅಲ್ಲಿ ನಿಲ್ಲದೆ ನೋಡನೋಡುತ್ತಿದ್ದಂತೆ ಕಣ್ಮರೆಯಾಗಿ ಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net