ಶಾಲೆಗೆ ಬಂದ ಕಾಳಿಂಗ !

cobra
ಪಾವೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾಣಿಸಿಕೊಂಡ ಸುಮಾರು 25 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ದಿಲೀಪ್ ಕುಮಾರ್ ಹಿಡಿದು ರಕ್ಷಣೆ ಮಾಡಿದರು.
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಪಾವೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಕಾಳಿಂಗ ಸರ್ಪ ಪತ್ತೆಯಾಗಿದೆ. ಸಂಜೆ ಶಾಲೆ ಬಿಡುವ ಸಂದರ್ಭ ಗಾರ್ಡನ್‌ನಲ್ಲಿ ಹಾವು ಕಾಣಿಸಿಕೊಂಡಿದೆ. ಇದನ್ನು ನೋಡಿದ ಒಂದಿಬ್ಬರು ಮಕ್ಕಳು ಕಲ್ಲೆಸೆದಿದ್ದು ಆಗ ಕಾಳಿಂಗ ಸರ್ಪ ಗಾರ್ಡನ್‌ನಿಂದ ಹೊರಬಂದಿದೆ. ಈ ವೇಳೆ ಶಿಕ್ಷಕರು ಹಾವನ್ನು ಗಮನಿಸಿ ಉರಗ ತಜ್ಞ ದಿಲೀಪ್ ಕುಮಾರ್ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ದಿಲೀಪ್ ಸುಮಾರು 25 ಅಡಿಯಷ್ಟು ಉದ್ದವಿದ್ದ ಕಾಳಿಂಗ ಸರ್ಪವನ್ನು ಹಿಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net