ಕೋಸ್ಟ್‌ಗಾರ್ಡ್‌ ಸನ್ನದ್ಧ ಸ್ಥಿತಿಯಲ್ಲಿರಲು ಐಜಿ ಸೂಚನೆ

1
Published on

ಮಂಗಳೂರು: ಕೋಸ್ಟ್‌ ಗಾರ್ಡ್‌ ಪಶ್ಚಿಮ ವಲಯದ ಇನ್‌ಸ್ಪೆಕ್ಟರ್‌ ಜನರಲ್‌ ಹಾಗೂ ಕಮಾಂಡರ್‌ ಎಸ್‌.ಪರಮೇಶ್‌ ಅವರು ಮಂಗಳೂರಿನಲ್ಲಿರುವ ಕೋಸ್ಟ್‌ಗಾರ್ಡ್‌ ಹೆಡ್‌ಕ್ವಾರ್ಟರ್ಸ್‌ಗೆ ಮಂಗಳವಾರ ಭೇಟಿ ನೀಡಿದರು. ಕರ್ನಾಟಕದಲ್ಲಿರುವ ಕೋಸ್ಟ್‌ಗಾರ್ಡ್‌ನ ಎಲ್ಲಾ ವಿಭಾಗಗಳೂ ಯಾವುದೇ ಸನ್ನಿವೇಶ ಎದುರಿಸುವುದಕ್ಕೆ ಸನ್ನದ್ಧ ಸ್ಥಿತಿಯಲ್ಲಿರುವುದನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಅಧಿಕಾರಿಗಳು, ನಾವಿಕರು, ರಕ್ಷಣಾ ನಾಗರಿಕರೊಂದಿಗೆ ಔಪಚಾರಿಕ ಮಾತುಕತೆ ನಡೆಸಿದ ಅವರು ಸಿಬ್ಬಂದಿ, ಅಧಿಕಾರಿಗಳು ಸರ್ವ ಸನ್ನದ್ಧ ಸ್ಥಿತಿಯನ್ನು ಸದಾ ಹೊಂದಿರುವುದು, ಕರಾವಳಿ ತೀರದಾದ್ಯಂತ ಯಾವಾಗಲೂ ತೀವ್ರ ನಿಗಾ ಇರಿಸುವುದರೊಂದಿಗೆ ಕಠಿಣ ಭದ್ರತಾ ಕ್ರಮಗಳನ್ನು ಹೊಂದಿರುವ ಮೂಲಕ ಸಮುದ್ರದ ಸುರಕ್ಷತೆ ಕಾಪಾಡಿಕೊಳ್ಳುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net