ಕರಾವಳಿಯ ಯುವಕರೂ ಸೇನೆಗೆ ಸೇರಿ

karyagara
ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ವತಿಯಿಂದ ಹೆಬ್ರಿ ಕಾಲೇಜಿನಲ್ಲಿ ಅಗ್ನಿಪಥ ಸೈನ್ಯ ಸೇರ್ಪಡೆಗೆ ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
Published on

ಹೆಬ್ರಿ: ದೇಶ ಸೇವೆಯೇ ಈಶ ಸೇವೆ, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಉತ್ತೇಜನ ಪಡೆಯಬೇಕಿದ್ದು, ಕರಾವಳಿ ಜಿಲ್ಲೆಗಳಿಂದ ಹೆಚ್ಚಿನ ಯುವಕರು ಸೇನೆಗೆ ಸೇರ್ಪಡೆಯಾಬೇಕು ಎಂದು ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಹೇಳಿದರು.

ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ವತಿಯಿಂದ ಅಗ್ನಿಪಥ ಸೈನ್ಯ ಸೇರ್ಪಡೆಗೆ ಮಾಹಿತಿ ಕಾರ್ಯಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಬಿ.ರಾಜೇಂದ್ರ ಕಿಣಿ ಸೇನಾ ಸೇರ್ಪಯ ಪ್ರಯೋಜನ ವಿವರಿಸಿದರು. ಮಾಜಿ ಸೈನಿಕ ರವಿ ಶೆಟ್ಟಿ ಅಗ್ನಿಪಥ ಸೇರ್ಪಡೆಗಿರುವ ನಿಯಮಗಳು, ಅವಕಾಶಗಳ ಕುರಿತು ಮಾಹಿತಿ ನೀಡಿದ್ದು, ತರಬೇತಿಯನ್ನೂ ನೀಡುವುದಾಗಿ ತಿಳಿಸಿದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಅಣ್ಣಯ್ಯ ಶೆಟ್ಟಿ, ಕೋಶಾಧಿಕಾರಿ ಜಯಕರ ಶೆಟ್ಟಿ, ವಸಂತ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಅಂಕಿತಾ ವಂದಿಸಿದರು. ಡಾ.ಪ್ರವೀಣ್‌ಕುಮಾರ್ ಎಸ್. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net