ಕರಾವಳಿ ಭದ್ರತಾ ತರಬೇತಿ ಸಮಾರೋಪ

udp-13-csp
Published on

ಉಡುಪಿ: ಪೊಲೀಸ್​ ಅಧಿಕಾರಿ ಹಾಗೂ ಸಿಬ್ಬಂದಿ ತರಬೇತಿ ಅವಧಿಯಲ್ಲಿ ಪಡೆದ ಮಾಹಿತಿಗಳನ್ನು ತಮ್ಮ ದಿನನಿತ್ಯದ ಕೆಲಸದಲ್ಲಿ ಅಳವಡಿಸಿಕೊಂಡಾಗ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೊಲೀಸ್​ ಅಧೀಕ್ಷಕ ಡಾ. ಅರುಣ್​ ಕೆ. ಹೇಳಿದರು.

ಶನಿವಾರ ಮಲ್ಪೆಯ ಸಿಎಸ್​ಪಿ ಕೇಂದ್ರ ಕಚೇರಿಯಲ್ಲಿ ಕರಾವಳಿ ಕಾವಲು ಪೊಲೀಸ್​ ಘಟಕದ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ 4ನೇ ತಂಡದ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಹಾಗೂ ಕರಾವಳಿ ಕಾವಲು ಪೊಲೀಸ್​ ಅಧೀಕ್ಷಕ ಅಂಶು ಕುಮಾರ್​ ಮಾತನಾಡಿದರು,
ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದ ಸಿಎಸ್​ಪಿ ಮಲ್ಪೆ ಠಾಣೆಯ ಮಹಿಳಾ ಪಿಎಸ್​ಐ ವೈಲೆಟ್​ ಫೆಮೀನಾ ಹಾಗೂ ದ್ವಿತಿಯ ಸ್ಥಾನ ಪಡೆದ ಸಿಎಸ್​ಪಿ ಗಂಗೊಳ್ಳಿ ಠಾಣೆಯ ಪೊಲೀಸ್​ ಸಿಬ್ಬಂದಿ ಚೇತನ್​ ಎಸ್​. ಮತ್ತು ವಾಸಂತಿ ಇವರನ್ನು ಗೌರವಿಸಲಾಯಿತು. ಪೊಲೀಸ್​ ನಿರೀಕ್ಷಕ ಪ್ರಮೋದ ಕುಮಾರ್​ ಸ್ವಾಗತಿಸಿ, ಉಪ-ನಿರೀಕ್ಷಕಿ ಸುಜಾತ ನಿರೂಪಿಸಿ, ಪೊಲೀಸ್​ ಉಪಾಧೀಕ್ಷಕ ಟಿ.ಎಸ್​ ಸುಲ್ಫಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net