

ಕಾರವಾರ: ಇಷ್ಟು ದಿನ ಘಟ್ಟದ ಮೇಲಿನ ಸಿದ್ದಾಪುರ ತಾಲೂಕಿಗೆ ಸೀಮಿತವಾಗಿದ್ದ ಮಂಗನ ಕಾಯಿಲೆ (ಕೆಎಫ್‌ಡಿ)ಕರಾವಳಿಗೂ ಕಾಲಿರಿಸಿದ್ದು, ಆತಂಕ ಹೆಚ್ಚಿಸಿದೆ.
ಅಂಕೋಲಾ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಮಾವಿನಕೆರೆ ಗ್ರಾಮದ 46 ವರ್ಷದ ಪುರುಷನಿಗೆ ಕೆಎಫ್‌ಡಿ ಇರುವುದು ಖಚಿತವಾಗಿದೆ. ಅವರನ್ನು ಕಾರವಾರ ಕ್ರಿಮ್ಸ್ಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈಗಾಗಲೇ ಸಿದ್ದಾಪುರ ತಾಲೂಕಿನಲ್ಲಿ 45 ಕೆಎಫ್‌ಡಿ ಪ್ರಕರಣಗಳು ಖಚಿತವಾಗಿವೆ. ಇಬ್ಬರು ಮೃತಪಟ್ಟಿದ್ದಾರೆ. ಅಂಕೋಲಾದಲ್ಲಿ 46 ನೇ ಪ್ರಕರಣ ಖಚಿತವಾಗಿದೆ. 2019 ರಲ್ಲೂ ಅಂಕೋಲಾ ತಾಲೂಕಿನಲ್ಲಿ ಕೆಎಫ್‌ಡಿ ಕಾಣಿಸಿಕೊಂಡಿತ್ತು.
ಮಾವಿನಕೆರೆ ಗ್ರಾಮದಲ್ಲಿ ಸುಮಾರು 50 ಜನರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಯಾವುದೇ ಮಂಗಗಳ ಸಾವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಆದರೆ, ಇಡೀ ತಾಲೂಕಿನಲ್ಲೂ ಎಚ್ಚರಿಕೆ ವಹಿಸಲಾಗಿದ್ದು, ಉಣ್ಣೆ ನಿರೋಧಕ ಡೆಫಾ ತೈಲದ ಬಾಟಲಿಗಳನ್ನು ಮನೆಗೆ ಎರಡು, ಮೂರರಂತೆ ವಿತರಿಸಲಾಗುತ್ತಿದೆ ಎಂದು ಡಿಎಚ್‌ಒ ಡಾ.ನೀರಜ್ ಬಿ.ವಿ.ತಿಳಿಸಿದ್ದಾರೆ.
ಸಹಾಯವಾಣಿ:
ಅಂಕೋಲಾದಲ್ಲಿ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್ ಜಿಲ್ಲಾಽಕಾರಿಗಳು ಹಾಗೂ ತಾಲೂಕು ಆರೋಗ್ಯ ಅಽಕಾರಿಗಳ ವಿಶೇಷ ಸಭೆ ನಡೆಸಿದರು.
ರಕ್ತದ ಮಾದರಿಗಳನ್ನು ಸಂಗ್ರಹಿಸಿ ಶಿವಮೊಗ್ಗ ಹಾಗೂ ಮಣಿಪಾಲಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಶೀಘ್ರದಲ್ಲಿ ವರದಿ ಬರಲು ಅನುಕೂಲವಾಗಲಿದೆ ಎಂದರು. ಅಲ್ಲದೆ, ಯಾರಿಗಾದರೂ ಜ್ವರ ಮುಂತಾದ ಕೆಫ್‌ಡಿ ಲಕ್ಷ ಣ ಕಂಡುಬAದಲ್ಲಿ ತಕ್ಷಣ ರಕ್ತದ ಪರೀಕ್ಷೆ ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ಸಹಾಯವಾಣಿ ತೆರೆಯಲು ಸೂಚಿಸಲಾಗುತ್ತಿದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದರು.
ಅರಣ್ಯ ಇಲಾಖೆ ಸಂಪರ್ಕ ಮಾಡಿದ್ದು, ಯಾವುದೇ ಮಂಗನ ಸಾವು ಕಂಡುಬಂದಲ್ಲಿ ತಕ್ಷಣ ವರದಿ ನೀಡಲು ಸೂಚನೆ ನೀಡಲಾಗಿದೆ. ಗ್ರಾಮಸ್ಥರೂ ಯಾವುದೇ ಮಂಗಗಳ ಸಾವು ಸಂಭವಿಸಿದಲ್ಲಿ ತಕ್ಷಣ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು.
ಕರಾವಳಿಯಲ್ಲಿ ರೋಗ ಕಾಣಿಸಿಕೊಂಡಿದ್ದಕ್ಕೆ ಇಡೀ ಜಿಲ್ಲೆಯಲ್ಲಿ ಎಚ್ಚರ ವಹಿಸಲು ಸೂಚಿಸಲಾಗಿದೆ. ಮುಖ್ಯವಾಗಿ ಕಾಡಂಚಿನ ಜನರು ಉಣ್ಣೆ ಹತ್ತಿಸಿಕೊಳ್ಳದಂತೆ ಎಚ್ಚರ ವಹಿಸಬೇಕು. ಜ್ವರದ ಲಕ್ಷಣ ಕಂಡರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅವರ ವಿನಂತಿಸಿದ್ದಾರೆ.
ಇದನ್ನೂ ಓದಿ: ಬಸ್-ಸ್ಕೂಟಿ ಡಿಕ್ಕಿ ತಾಯಿ ಮಗಳು ದಾರುಣ ಸಾವು