ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ಜೆರ್ಸಿ ಅನಾವರಣ

ಕೋಸ್ಟಲ್ ಕಿಂಗ್ಸ್ ಮಂಗಳೂರು ಕ್ರಿಕೆಟ್ ತಂಡದ ಜೆರ್ಸಿ ಅನಾವರಣ ಕಾರ್ಯಕ್ರಮ ರವಿವಾರ ತಾಜ್ ವಿವಂತ ಹೋಟೆಲಿನ ಸಭಾಂಗಣದಲ್ಲಿ ನಡೆಯಿತು. ಡಾ. ಶ್ರೀಕಾಂತ್ ರೈ, ಬಿ.ಎನ್. ಮಧುಕರ್, ಅವಿನಾಶ್ ವೈದ್ಯ, ವಿನೋದ್ ನಾಯ್ಡು, ರೂಪೇಶ್ ಶೆಟ್ಟಿ ಉಪಸ್ಥಿತರಿದ್ದರು.
ಕೋಸ್ಟಲ್ ಕಿಂಗ್ಸ್ ಮಂಗಳೂರು ಕ್ರಿಕೆಟ್ ತಂಡದ ಜೆರ್ಸಿ ಅನಾವರಣ ಕಾರ್ಯಕ್ರಮ ರವಿವಾರ ತಾಜ್ ವಿವಂತ ಹೋಟೆಲಿನ ಸಭಾಂಗಣದಲ್ಲಿ ನಡೆಯಿತು. ಡಾ. ಶ್ರೀಕಾಂತ್ ರೈ, ಬಿ.ಎನ್. ಮಧುಕರ್, ಅವಿನಾಶ್ ವೈದ್ಯ, ವಿನೋದ್ ನಾಯ್ಡು, ರೂಪೇಶ್ ಶೆಟ್ಟಿ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಟಿ-20 ಕ್ರಿಕೆಟ್ ಟೂರ್ನಮೆಂಟ್ "ಮಹಾರಾಜ ಟ್ರೋಫಿ-2026"
  • ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‍ಸಿಎ) ಆಯೋಜನೆ
  • ಕೋಸ್ಟಲ್ ಕಿಂಗ್ಸ್ ಮಂಗಳೂರು ಕ್ರಿಕೆಟ್ ತಂಡದ ನಾಯಕನಾಗಿ ಕರುಣ್ ನಾಯರ್
  • ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯ ಮೈದಾನಗಳಲ್ಲಿ ಪಂದ್ಯಗಳು
ಮಂಗಳೂರು: ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‍ಸಿಎ) ವತಿಯಿಂದ ನಡೆಯುವ ಪ್ರೀಮಿಯರ್ ಟಿ-20 ಕ್ರಿಕೆಟ್ ಟೂರ್ನಮೆಂಟ್ "ಮಹಾರಾಜ ಟ್ರೋಫಿ-2026"ರಲ್ಲಿ ಪಾಲ್ಗೊಳ್ಳುವ ಕೋಸ್ಟಲ್ ಕಿಂಗ್ಸ್ ಮಂಗಳೂರು ಕ್ರಿಕೆಟ್ ತಂಡದ ಜೆರ್ಸಿ ಅನಾವರಣ ಕಾರ್ಯಕ್ರಮವು ಕೆಎಸ್‍ಸಿಎ ಆಶ್ರಯದಲ್ಲಿ ರವಿವಾರ ನಗರದ ತಾಜ್ ವಿವಂತ ಹೋಟೆಲಿನ ಸಭಾಂಗಣದಲ್ಲಿ ನಡೆಯಿತು.
ಕೋಸ್ಟಲ್ ಕಿಂಗ್ಸ್ ಮಂಗಳೂರು ಕ್ರಿಕೆಟ್ ತಂಡದ ನಾಯಕನಾಗಿ ಕರುಣ್ ನಾಯರ್ ಮತ್ತು ಉಪನಾಯಕನಾಗಿ ಶ್ರೇಯಸ್ ಗೋಪಾಲ್ ಅವರನ್ನು ಕಾರ್ಯಕ್ರಮದಲ್ಲಿ ಆಯ್ಕೆ ಮಾಡಲಾಯಿತು.
ಕೆಎಸ್‍ಸಿಎ ವತಿಯಿಂದ ಜೂನ್ ಮತ್ತು ಜುಲೈನಲ್ಲಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ಮಾಲೀಕತ್ವವನ್ನು ಮಾನ್ಯತಾ ಡೆವಲಪರ್ಸ್ ಪಡೆದುಕೊಂಡಿದೆ.
ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‍ಸಿಎ) ಮಂಗಳೂರು ವಲಯದ ಅಧ್ಯಕ್ಷ ಡಾ. ಶ್ರೀಕಾಂತ್ ರೈ ಅವರು ಮಾತನಾಡಿ, ತಳಮಟ್ಟದಿಂದ ಕ್ರಿಕೆಟ್ ಅನ್ನು ಉತ್ತೇಜಿಸುವ ಹಾಗೂ ಯುವ ಪ್ರತಿಭೆಗಳನ್ನು ಬೆಳೆಸುವ ಸಲುವಾಗಿ ಮುಂದಿನ ದಿನಗಳಲ್ಲಿ ಶಾಲಾಮಟ್ಟದಲ್ಲೇ ಕ್ರಿಕೆಟ್ ಅನ್ನು ಆಯೋಜಿಸುವ ಕುರಿತು ಕೆಎಸ್‍ಸಿಎ ಚಿಂತನೆ ನಡೆಸುತ್ತಿದೆ. ಮಳೆ ಬಂದರೂ ಆಟ ನಿಲ್ಲಿಸದೆ ಮನ್ಸೂನ್ ಕ್ರಿಕೆಟ್ ಆಯೋಜಿಸುವ ಕುರಿತೂ ಚರ್ಚೆ ನಡೆಸಲಾಗುತ್ತಿದೆ ಎಂದರು.
ಕೆಎಸ್‍ಸಿಎ ಕೋಶಾಧಿಕಾರಿ ಬಿ.ಎನ್. ಮಧುಕರ್, ಕೆಎಸ್‍ಸಿಎ ಸದಸ್ಯ ಅವಿನಾಶ್ ವೈದ್ಯ, ಮಾನ್ಯತಾ ಡೆವಲಪರ್ಸ್‌ನ ನಿರ್ದೇಶಕ, ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ಮಾಲೀಕ ವಿನೋದ್ ನಾಯ್ಡು, ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಉಪಸ್ಥಿತರಿದ್ದರು. ಶರ್ಮಿಳಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ತಂಡಕ್ಕೆ ಆಯ್ಕೆಯಾದ ಆಟಗಾರರು:
ಎಲ್ಲ ಆಟಗಾರರನ್ನು ಬಿಡ್ಡಿಂಗ್ ಮೂಲಕ ಈಗಾಗಲೇ ಆಯ್ಕೆ ಮಾಡಲಾಗಿದ್ದು, ತಂಡದಲ್ಲಿ ಕೆಳಗಿನ ಆಟಗಾರರಿದ್ದಾರೆ:
ಕರುಣ್ ನಾಯರ್ (ಕ್ಯಾಪ್ಟನ್)
ಶ್ರೇಯಸ್ ಗೋಪಾಲ್ (ಉಪನಾಯಕ)
ಧೀರಜ್ ಜೆ. ಗೌಡ
ಎಸ್.ಜೆ. ನಿಕಿನ್ ಜೋಸ್
ಸೂರಜ್ ಅಹುಜಾ
ವೆಂಕಟೇಶ್ ಎಂ.
ಆದರ್ಶ್ ಎಸ್.ಜೆ.
ಕುಶಾಲ್ ಎಂ. ವಧ್ವಾನಿ
ಸಿದ್ದಾರ್ಥ್ ಅಗರವಾಲ್
ರಾಜ್‌ವೀರ್ ವಡ್ವಾ
ಅನ್ವಯ್ ದ್ರಾವಿಡ್
ಸಂತೋಷ್ ಸಿಂಗ್
ಕಾರ್ತಿಕ್ ಸಿ.ಎ.
ಕೌಶಿಕ್ ವಿ.
ಪೃಥ್ವಿರಾಜ್ ಶೇಖಾವತ್
ಆರ್ಯ ಜೆ. ಗೌಡ
ಆರೋನ್ ಸಿರಿಲ್ ಕ್ರಿಸ್ಟಿ
ರತನ್ ಬಿ.ಆರ್.
ವಿಶೇಷ ಆಹ್ವಾನಿತರು: ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಅವರು ವಿಶೇಷ ಆಹ್ವಾನಿತರಾಗಿ ತಂಡದ ಜೊತೆಯಲ್ಲಿ ಇರಲಿದ್ದಾರೆ ಎನ್ನುವ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ಕೆಎಸ್‍ಸಿಎ ಪದಾಧಿಕಾರಿಗಳು ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net