ಪಿಕಾರ್ಡ್ ಬ್ಯಾಂಕ್‌ನಲ್ಲಿ ಮೈತ್ರಿ ಕೂಟ ಜಯಭೇರಿ

28 HOS 2
ಪಿಕಾರ್ಡ್ ಬ್ಯಾಂಕ್‌ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಹೊಸನಗರದಲ್ಲಿ ಕಾಂಗ್ರೆಸ್-ಜೆಡಿಎಸ್‌ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಎಂ.ವಿ.ಜಯರಾಮ್, ಸತೀಶ್ ಪಟೇಲ್, ಗುರುಮೂರ್ತಿ ಇತರರಿದ್ದರು.
Published on

ಹೊಸನಗರ: ಪೀಕಾರ್ಡ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟ ಭರ್ಜರಿ ಗೆಲುವು ದಾಖಲಿಸಿದೆ.
ಒಟ್ಟು 12 ಕ್ಷೇತ್ರಗಳಿದ್ದು 7 ಸದಸ್ಯರು ಅವಿರೋಧ ಆಯ್ಕೆಯಾಗಿದ್ದರು. ಉಳಿದ 5 ಕ್ಷೇತ್ರಗಳಿಗೆ ಚುನಾವಣೆಯಲ್ಲಿ 4 ರಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ, 1ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಸಾಲ ಪಡೆಯದವರ ಕ್ಷೇತ್ರದಿಂದ ಮೈತ್ರಿಕೂಟದ ಎಂ.ವಿ.ಜಯರಾಂ, ಕಸಬಾ ‘ಬಿ’ ಕ್ಷೇತ್ರದಿಂದ ಮಹೇಂದ್ರ, ಕಸಬಾ ‘ಸಿ’ ಕ್ಷೇತ್ರದಿಂದ ಬೆನ್ನಟ್ಟೆ ಗುರುಮೂರ್ತಿ, ಕೆರೆಹಳ್ಳಿ ‘ಸಿ’ ಕ್ಷೇತ್ರದಿಂದ ಹೇಮಾವತಿ ತೂಕಪ್ಪ, ಹುಂಚಾ ‘ಎ’ ಕ್ಷೇತ್ರದಿಂದ ಹೂವಮ್ಮ ಬಡಿಯಪ್ಪ, ಹುಂಚಾ ‘ಬಿ’ ಕ್ಷೇತ್ರದಿಂದ ನರೇಂದ್ರ ಸಮಟಗಾರು, ನಗರ ‘ಬಿ’ ಕ್ಷೇತ್ರದಿಂದ ಬೇಳೂರು ಈಶ್ವರಪ್ಪ ಗೌಡ ಅವಿರೋಧ ಆಯ್ಕೆಯಾಗಿದ್ದಾರೆ.
ಚುನಾವಣೆ ನಡೆದ ಕ್ಷೇತ್ರಗಳಾದ ಕಸಬಾ ಎ ಕ್ಷೇತ್ರದಿಂದ ಕೆ.ಟಿ.ನಾಗೇಶ್, ಕೆರೆಹಳ್ಳಿ ‘ಎ‘ ಕ್ಷೇತ್ರದಿಂದ ವೇದಾಂತಪ್ಪ, ಹುಂಚ ಸಿ. ಕ್ಷೇತ್ರದಿಂದ ವಾಲೆಮನೆ ನಾಗೇಶ್, ನಗರ ‘ಎ’ ಕ್ಷೇತ್ರದಿಂದ ಸತೀಶ ಪಟೇಲ್, ಮೈತ್ರಿಕೂಟದ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ
ಕೆರೆಹಳ್ಳಿ ‘ಬಿ’ ಕ್ಷೇತ್ರದಿಂದ ಬಿಜೆಪಿಯ ದೇವೇಂದ್ರಪ್ಪ ಗೆಲುವು ಸಾಧಿಸಿದ್ದಾರೆ.
ಮೈತ್ರಿಕೂಟದ ರೂವಾರಿ, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ.ಜಯರಾಂ ಮಾತನಾಡಿ, ಇದು ಜನರು ಪ್ರಾಮಾಣಿಕತೆಗೆ ನೀಡಿದ ಮನ್ನಣೆ. ಸುಸ್ತಿ ಸಾಲವನ್ನು ಇಳಿಸುವ ಮೂಲಕ ಬ್ಯಾಂಕ್ ನಷ್ಟದಿಂದ ಹೊರತರುವುದೇ ಮುಂದಿನ ಗುರಿ ಎಂದಿದ್ದಾರೆ.
ಮೈತ್ರಿಕೂಟ ಜಯಭೇರಿ ಭಾರಿಸಿದ ಹಿನ್ನೆಲೆ ಕಾಂಗ್ರೆಸ್-ಜೆಡಿಎಸ್‌ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net