ಕಲ್ಲಿದ್ದಲು ಲಾರಿ ಪಲ್ಟಿ, ಕೊಪ್ಪಳ ಜಿಲ್ಲೆಯ ಒಬ್ಬನ ಸಾವು

23hnr1
Published on

ಹೊನ್ನಾವರ: ಕಲ್ಲಿದ್ದಲು ತುಂಬಿದ್ದ ಲಾರಿ ಪಲ್ಟಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಗೇರುಸೊಪ್ಪಾ ಸುಳೆಮುರ್ಕಿ ಹೆದ್ದಾರಿಯ ತಿರುವಿನಲ್ಲಿ ಶುಕ್ರವಾರ ನಡೆದಿದೆ. ಕೊಪ್ಪಳ ಜಿಲ್ಲೆಯ ಮಾರುತಿ ಕೃಷ್ಣ ನಾಯ್ಕ (29) ಆಂಬುಲೆನ್ಸ್ ಮೂಲಕ ಹೊನ್ನಾವರ ತಾಲೂಕಾಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದಾರೆ. ಲಾರಿ ಚಾಲಕ ಬಳ್ಳಾರಿ ಜಿಲ್ಲೆಯ ಅಶೋಕ ಪೀರು ನಾಯಕ ಗಾಯಗೊಂಡಿದ್ದಾರೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net