ಮಾಲೀಕನಿಗೆ ದೂರು ನೀಡಿದ್ದಕ್ಕಾಗಿ ಸಹೋದ್ಯೋಗಿ ಕೊಲೆ, ಅಪರಾಧಿಗೆ ಜೀವಾವಧಿ ಶಿಕ್ಷೆ

High Court Logo
Published on

ವಿಜಯಪುರ: ಕೆಲಸ ಮಾಡುವ ಕಂಪನಿಯ ಮಾಲೀಕನಿಗೆ ದೂರು ಹೇಳಿದ ಆರೋಪದ ಮೇರೆಗೆ ಸಹೋದ್ಯೋಗಿಯನ್ನು ಕೊಲೆ ಮಾಡಿದ ಅಪರಾಧಿಗೆ ಇಲ್ಲಿನ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ.ದಂಡ ವಿಧಿಸಿ ಮಂಗಳವಾರ ತೀರ್ಪು ಪ್ರಕಟಿಸಿದೆ.

ಮಧ್ಯಪ್ರದೇಶದ ಇಂದೋರ್‌ನ ನಿವಾಸಿ ಪತ್ತೇಸಿಂಗ್ ಊರ್ಫ್ ಸಂಜಯ ಪೂರನಸಿಂಗ್ ರಜಪೂತ ಶಿಕ್ಷೆಗೆ ಗುರಿಯಾಗಿದ್ದಾನೆ. 2018 ಜು.5ರಂದು ತಿಡಗುಂದಿಯಿಂದ ವಿಜಯಪುರಕ್ಕೆ ಸೇರುವ ಮಾರ್ಗದಲ್ಲಿ ಗೋಪಾಲ ಭೋಸಲೆ ಎಂಬುವರ ಜಮೀನಿನ ಹತ್ತಿರ ದಿನೇಶ ಪರ್ವತ ಎಂಬಾತನ ಕೊಲೆಗೈದಿದ್ದನು.

ಮೃತ ದಿನೇಶ ಹಾಗೂ ಅಪರಾಧಿ ಪತ್ತೇಸಿಂಗ್ ರಾಜಪಾಲ ಲಿಕ್ವಿಡ್ ಕಾರ್ಗೋ ಮೂವರ್ಸ್ ಪ್ರಾವೆಟ್ ಲಿಮಿಟೆಡ್‌ನ ಟ್ಯಾಂಕರ್ ಮೇಲೆ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ದಿನೇಶ ತನ್ನ ಕುರಿತು ಮಾಲೀಕನಿಗೆ ಇಲ್ಲ ಸಲ್ಲದ ದೂರು ಹೇಳಿದ್ದಾನೆಂದು ಆರೋಪಿಸಿ ಪತ್ತೇಸಿಂಗ್ ಕಬ್ಬಿಣದ ರಾಡ್‌ನಿಂದ ದಿನೇಶ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದನು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮದ್ವೇಶ ದಬೇರ ಪತ್ತೇಸಿಂಗ್‌ಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ವಿ.ಜಿ. ಮಾಮನಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net