ಸಹಕಾರಿ ಸಂಸ್ಥೆಗಳು ರಾಜಕೀಯದಿಂದ ಹೊರಗುಳಿಯಲಿ

manjunath
Published on

ಮುಳಬಾಗಿಲು: ಸಹಕಾರಿ ಸಂಸ್ಥೆಗಳು ಒಬ್ಬ ವ್ಯಕ್ತಿ, ಕುಟುಂಬ, ರಾಜಕೀಯ ಪಗಳ ಹಿಡಿತದಿಂದ ಹೊರಗಿರಬೇಕು. ಆಯ್ಕೆಯಾದವರೇ ಸ್ವಹಿತಾಸಕ್ತಿಗಾಗಿ ತಮಗೆ ಬೇಕಾದವರಿಗೆ ಸಾಲ ನೀಡುವುದು ಮತದಾರರನ್ನು ಮಾಡಿಕೊಳ್ಳುವ ಹುನ್ನಾರಗಳು ಕೊನೆಗೊಳ್ಳಬೇಕು ಎಂದು ಕೋಲಾರ ಶಾಸಕ, ಮುಳಬಾಗಿಲು ಟಿಎಪಿಸಿಎಂಎಸ್​ ಅಧ್ಯ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.

ನಗರದ ಟಿಎಪಿಸಿಎಂಎಸ್​ನಲ್ಲಿ ಸೋಮವಾರ ಮಾತನಾಡಿದ ಅವರು, ಮುಳಬಾಗಿಲು ಪಿಎಲ್​ಡಿ ಬ್ಯಾಂಕ್​ ಸುಸ್ತಿಯಲ್ಲಿದ್ದು, ಆ ಸಮಯದಲ್ಲಿ ಬ್ಯಾಂಕಿನ ಪುನರ್​ ಚೇತನಕ್ಕೆ ಆಸರೆಯಾಗಿದ್ದೇನೆ. ಒಂದು ಬಾರಿ 30 ಲ ರೂ., ಮತ್ತೊಂದು ಬಾರಿ 15 ಲ ರೂ.ಪಾವತಿ ಮಾಡಿದ್ದು, ಬ್ಯಾಂಕಿಗೆ ಮೂಲ ಸೌಲಭ್ಯಗಳು ಒದಗಿಸಲಾಗಿದೆ. ಶಾಸಕನಾಗುವ ಮುಂಚೆ ಮತ್ತು ನಂತರ ಕಾರ್ಯನಿರ್ವಹಿಸಿದ್ದೇನೆ. ಆ ಬಗ್ಗೆ ಅಲ್ಲಿನ ಎಲ್ಲವೂ ಕೈಗನ್ನಡಿಯಾಗಿ ಕಾಣುತ್ತದೆ ಎಂದರು.

ಸಹಕಾರಿ ಸಂಸ್ಥೆಗಳಲ್ಲಿ ಅರ್ಹ ರೈತರೆಲ್ಲರೂ ಸದಸ್ಯರಾಗಲು ಮುಕ್ತ ಅವಕಾಶ ಕಲ್ಪಿಸಬೇಕು. ಆದರೆ ನಿರ್ದೇಶಕರಾದವರು ಇದಕ್ಕೆ ನಿಬಂಧನೆ ಹಾಕಿ ತಾವೇ ಅಥವಾ ತಮ್ಮ ಕುಟುಂಬದವರೇ ಪುನರಾಯ್ಕೆ ಆಗಬೇಕು ಎಂಬ ಉದ್ದೇಶ ಹೊಂದುವುದಕ್ಕೆ ಇನ್ನು ಮುಂದೆ ಅವಕಾಶ ಇರುವುದಿಲ್ಲ. ಟಿಎಪಿಸಿಎಂಎಸ್​ನಲ್ಲಿ ಅರ್ಜಿ ಸಲ್ಲಿಸಿದವರಿಗೆ ತಣ ಸದಸ್ಯತ್ವ ನೀಡುತ್ತಿದ್ದೇವೆ ಎಂದರು.

ಎಲ್ಲ ನಿರ್ದೇಶಕರ ಒಮ್ಮತದಿಂದ ಪಿಎಲ್​ಡಿ ಬ್ಯಾಂಕ್​ಗೆ 2ನೇ ಬಾರಿ ಚಿಕ್ಕಪ್ಪ ಕೊತ್ತೂರು ಗೆಂಗಿರೆಡ್ಡಿ ಅವರು ಅಧ್ಯರಾಗಿದ್ದಾರೆ ಎಂದು ತಿಳಿಸಿದರು.

ಅರ್ಜಿ ಸಲ್ಲಿಸಿ: ಇದುವರೆಗೂ ಬ್ಯಾಂಕ್​ ಸಾಲಕ್ಕೆ ಆಯಾ ೇತ್ರಗಳ ನಿರ್ದೇಶಕರ ಒಪ್ಪಿಗೆ ಇದ್ದರೆ ಮಾತ್ರ ಸಾಲ ನೀಡಲಾಗುತ್ತಿತ್ತು. ಇನ್ಮುಂದೆ ಇದಕ್ಕೆ ಬ್ರೇ ಹಾಕಿ ಅರ್ಹರೈತರಿಗೆ ಸಾಲ ನೀಡುವ ಮೂಲಕ ಸಹಕಾರಿ ಬ್ಯಾಂಕನ್ನು ರೈತರ ಬ್ಯಾಂಕ್​ಆಗಿ ಪರಿವರ್ತನೆ ಮಾಡುವಂತೆ ಚಿಕ್ಕಪ್ಪ ಗೆಂಗಿರೆಡ್ಡಿ ಅವರಿಗೆ ಸೂಚಿಸಿದ್ದು, ಅದರಆಗುಹೋಗುಗಳನ್ನು ಸಂಪೂರ್ಣ ಗಮನಿಸುತ್ತೇನೆ ಎಂದು ಕೊತ್ತೂರು ಮಂಜುನಾಥ್​ ತಿಳಿಸಿದರು.

ಬೆದರಿಕೆಗೆ ಬಗ್ಗೋದಿಲ್ಲ: ಪಿಎಲ್​ಡಿ ಬ್ಯಾಂಕ್​ನ ನಿರ್ದೇಶಕ ಎಂ.ಎಮ್​.ಶಂಕನಾರಾಯಣ ಅವರು ಪ್ರಮಾಣಪತ್ರ ಹರಿದು ಹಾಕಿ ಕಾಂಗ್ರೆಸ್​ ಮುಖಂಡರು ಮೋಸ ಮಾಡಿದ್ದಾರೆ, ನನಗೆ ಈ ಹಿಂದೆ ಮಾತು ಹೇಳಿದ್ದರು ಎಂಬುದು ಸರಿಯಲ್ಲ. 10 ರಲ್ಲಿ 9 ನಿರ್ದೇಶಕರು ಗೆಂಗಿರೆಡ್ಡಿ ಪರ ಇದ್ದಿದ್ದರಿಂದ ಆಯ್ಕೆಯಾಗಿದ್ದಾರೆ. ಶಂಕನಾರಾಯಣ ರಾಜೀನಾಮೆ ನೀಡುವುದಿದ್ದರೆ ನೀಡಲಿ ಅಭ್ಯಂತರವಿಲ್ಲ. ಆರಂಭದಲ್ಲಿ ಗಂಗಿರೆಡ್ಡಿ ಅವರೇ ಅಧ್ಯಕ್ಷರಾಗಲು ಒಪ್ಪಿ, ಕೊನೇ ಳಿಗೆಯಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ರೈತರೇ ಬ್ಯಾಂಕಿನ ಯಜಮಾನರು ಎಂಬುದನ್ನು ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದು ಕೊತ್ತೂರು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ಕುಮಾರ್​, ವೇಮಗಲ್​ ಎಎಸ್​.ಎ್​.ಸಿ.ಎಸ್​. ಅಧ್ಯ ಮುನಿರಾಜು, ಮುಖಂಡರಾದ ಹರೀಶ್​, ನಂದಿನಿ ಪ್ರವಿಣ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net