

ಶಿರೋಳ: ಸಹಕಾರ ಸಂಘಗಳು ಗ್ರಾಮೀಣರ ಆಶಾಕಿರಣಗಳಾಗಿವೆ ಎಂದು ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರಶೇಖರ ಸೊಬರದ ಹೇಳಿದರು. ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷ ಮಂಜುನಾಥ ಕುರವಿನಶೆಟ್ಟಿ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷರಾದ ಸಂಗವ್ವ ಕೊಂಗವಾಡ, ಚಿನ್ನವ್ವ ಮೆಣಸಗಿ, ಕರಬಸಯ್ಯ ಬೂಸನೂರಮಠ, ಉಮೇಶಗೌಡ ಪಾಟೀಲ, ಉಮೇಶ ಹಳ್ಳಿ, ಶಿವರಾಯಪ್ಪ ಮೂಲಿಮನಿ, ಲೋಕಪ್ಪ ಕರಕಿಕಟ್ಟಿ, ಗುರಶಾಂತಯ್ಯ ವಸ್ತ್ರದ, ಪೂರ್ಣಿಮಾ ಪಾಟೀಲ, ಬಸಯ್ಯ ಸರಗಣಾಚಾರಿ, ಸಿದ್ಧಲಿಂಗೇಶ ಶೆಟ್ಟರ, ಸುಭಾಸ ತುಕ್ಕೊಜಿ, ಆನಂದ ಚಂಗಳಿ ಇತರರಿದ್ದರು.