ಆರ್ಥಿಕ ಚೈತನ್ಯಕ್ಕೆ ಸಹಕಾರ ಸಂಘ ಪೂರಕ

11hos1p sahakari
ಶ್ರೀ ಶಿವಪ್ಪನಾಯಕ ಸಹಕಾರ ಸಂಘವನ್ನು ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಎನ್.ವೈ.ಸುರೇಶ್, ಕರುಣಾಕರಶೆಟ್ಟಿ, ಎಂ.ವಿಶ್ವನಾಥ ಇತರರಿದ್ದರು.
Published on

ಹೊಸನಗರ: ಹಿಂದಿನಿಂದಲೂ ಶೋಷಿತ ವರ್ಗ ಆರ್ಥಿಕ ದುರ್ಬಲತೆಗೆ ಒಳಗಾಗುತ್ತಲೇ ಬಂದಿದೆ. ಆ ಶೋಷಣೆಯಿಂದ ಹೊರಬರಲು ಸಹಕಾರ ಸಂಘಗಳು ಸಹಕಾರಿಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತಾಲೂಕಿನ ಚಿಕ್ಕಪೇಟೆ ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ಶಿವಪ್ಪ ನಾಯಕ ಸಹಕಾರ ಸಂಘಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಸಹಕಾರಿ ಸಂಸ್ಥೆಗಳು ಪರಸ್ಪರ ಸಹಕಾರದಿಂದ ಬೆಳೆಯುತ್ತವೆ. ಲಾಭವು ಕೂಡ ಷೇರುದಾರರಿಗೆ ಹಂಚಿಕೆಯಾಗುತ್ತದೆ. ಆದರೆ ಕೊಟ್ಟವ ಕೋಡಂಗಿ ಇಸ್ಕಂಡವ ವೀರಭದ್ರ ಅನ್ನುವ ಭಾವನೆಯಿಂದ ಹೊರ ಬರಬೇಕು. ಕೊಟ್ಟು ತೆಗೆದುಕೊಳ್ಳುವ ಒಳ್ಳೆಯ ಮನಸ್ಥಿತಿಯನ್ನು ಬೆಳಸಿಕೊಳ್ಳಬೇಕಿದೆ ಎಂದರು.
ಸಹಕಾರ ಸಂಘದ ಯೋಜನೆಗಳು ರೈತರಿಗೆ, ಜನರಿಗೆ, ಕೂಲಿ ಕಾರ್ಮಿಕರಿಗೆ ಪೂರಕವಾಗಿರಬೇಕು. ಸಹಕಾರ ಸಂಘದ ನಿರ್ದೇಶಕರು ಶುದ್ಧಹಸ್ತರಾಗಿರಬೇಕು. ಪ್ರಜ್ಞಾವಂತ ಆಡಳಿತ ಮಂಡಳಿ ಇದ್ದಲ್ಲಿ ಸಹಕಾರಿ ಸಂಘ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಎನ್.ವೈ.ಸುರೇಶ್ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ರಾಮಪ್ಪಗೌಡ ಹೆರಗೊಡಿಗೆ, ಗ್ರಾಪಂ ಅಧ್ಯಕ್ಷೆ ಸಂಗೀತಾ, ಉಪಾಧ್ಯಕ್ಷೆ ಸುಮನಾ ಭಾಸ್ಕರ್, ಸದಸ್ಯರಾದ ಕರುಣಾಕರ ಶೆಟ್ಟಿ, ಎಂ.ವಿಶ್ವನಾಥ, ನಿರ್ಮಲಾ, ಸವಿತಾ, ಸುಮತಿದಾಸ್, ಸಂಘದ ಉಪಾಧ್ಯಕ್ಷ ಕೆ.ವಿ.ಸುಬ್ರಹ್ಮಣ್ಯ, ಮ್ಯಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ಪ್ರಮುಖರಾದ ಪ್ರಸನ್ನಕುಮಾರ್, ಎಚ್.ಜಿ.ರಮಾಕಾಂತ, ಪ್ರೊ.ರಾಮಪ್ಪಗೌಡ, ಎಸ್.ಎನ್.ದೇವರಾಜ್, ಪಿ.ಪ್ರಕಾಶ್, ಬಿ.ಇ.ಮಂಜುನಾಥ್, ಎಸ್.ಎಸ್.ಸುರೇಶ್, ಎಚ್.ಟಿ.ಚಂದ್ರ, ಬಿ.ಪುರುಷೋತ್ತಮ್, ಅಶ್ವಿನಿ ಎಸ್.ಪಾಟೀಲ್, ಕೆ.ಕವಿರಾಜ್, ಎನ್.ಸುಗುಣಾ, ಕೆ.ಸವಿತಾ, ಟಿ.ಜಿ.ಸೃಪಾ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ.ಎಸ್.ಶರಣ್ಯ ಇದ್ದರು. ಬಂಕ್ರಿಬೀಡು ಮಂಜುನಾಥ ಸ್ವಾಗತಿಸಿದರು. ಉಪನ್ಯಾಸಕ ಶ್ರೀಧರ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net