ಸಣ್ಣ ರೈತರ ನೆರವಿಗೆ ಪತ್ತಿನ ಸಹಕಾರ ಸಂಘಗಳ ಪಾತ್ರ ಮುಖ್ಯ

23 ckm 9
ಚಿಕ್ಕಮಗಳೂರು ಹೊರವಲಯದ ಮುಗುಳುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್, ಎಂ.ಎಸ್.ನಿರAಜನ್, ಶಿವಣ್ಣಗೌಡ, ಎಂ.ಡಿ.ರವಿ, ಧರ್ಮಯ್ಯ, ಎಚ್.ಎಲ್.ಬಲರಾಮ್, ಸುಮಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಮಲೆನಾಡು ಭಾಗದ ಸಣ್ಣ, ಅತಿಸಣ್ಣ ರೈತರ ಪರವಾಗಿ ಕೆಲಸ ಮಾಡುವಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಪಾತ್ರ ಅತಿಮುಖ್ಯ ಎಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ತಿಳಿಸಿದರು.

ನಗರದ ಹೊರವಲಯದ ಮುಗುಳುವಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಸಹಕಾರಿ ಸಂಘದ ವ್ಯಾಪ್ತಿಯ ರೈತರಿಗೆ ತುರ್ತು ಹಣದ ಅವಶ್ಯಕತೆ ಏರ್ಪಟ್ಟಾಗ ಸಹಕಾರಿ ಬ್ಯಾಂಕ್ ನೆರವಿಗೆ ಬರುತ್ತದೆ. ಆದರೆ ಇದುವರೆಗೂ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಪ್ರಾರಂಭಿಸಿಲ್ಲದರ ಬಗ್ಗೆ ವಿಷಾಧ ವ್ಯಕ್ತಪಡಿಸಿದರು.
ಆದಾಯವನ್ನು ಕ್ರೂಢೀಕರಿಸಿ ಉಳಿತಾಯ ಮಾಡಿ ರೈತರಿಗೆ ಸಾಲ ನೀಡಬೇಕು. ಈ ನಿಟ್ಟಿನಲ್ಲಿ ನಿಶ್ಚಿತ ಠೇವಣಿ ಸಂಗ್ರಹಿಸಲು ಸದಸ್ಯರು ಹಾಗೂ ನೌಕರ ಸಿಬ್ಬಂದಿ ಶ್ರಮಿಸಬೇಕು. ಈ ಸಹಕಾರಿ ಬ್ಯಾಂಕಿನ ವ್ಯಾಪ್ತಿಗೆ ಮೂರು ಗ್ರಾಮ ಪಂಚಾಯಿತಿಗಳು ಬರಲಿದ್ದು, ಇದನ್ನು ದೊಡ್ಡ ಮಟ್ಟಕ್ಕೆ ಬೆಳೆಯಲು ಎಲ್ಲ ಸಹಕಾರಿಗಳ ಶ್ರಮ ಅಗತ್ಯ. ಶಾಸಕಿಯಾಗಿ ಈಗ ನೀಡಿರುವ ಅನುದಾನದ ಜೊತೆಗೆ ಮುಂದೆ ಹೆಚ್ಚಿನ ಸಹಕಾರ-ಸಹಾಯ ನೀಡಲು ಬದ್ಧವಾಗಿರುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಎಂ.ಎಸ್.ನಿರAಜನ್ ಮಾತನಾಡಿ, ಮುಗುಳುವಳ್ಳಿ ಪತ್ತಿನ ಸಹಕಾರ ಸಂಘಕ್ಕೆ ೨೬ ಹಳ್ಳಿಗಳು ಬರಲಿದ್ದು, ಇನ್ನೂ ೩೬ ಹಳ್ಳಿ ಸೇರ್ಪಡೆಗೆ ಮುಂದಾದರೆ ಆಡಳಿತ ನಡೆಸಲು ಸಾಧ್ಯವಿಲ್ಲ. ಆಗ ಎಲ್ಲರಿಗೂ ನ್ಯಾಯ ಒದಗಿಸಲು ಆಗುವುದಿಲ್ಲ ಎಂದು ಹೇಳಿದರು.
ಈ ಪತ್ತಿನ ಕೃಷಿ ಅಭಿವೃದ್ಧಿ ಬ್ಯಾಂಕಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಒಂದು ಕೋಟಿ ರೂ. ಅನುದಾನ ನೀಡಿದರುವುದರಿಂದ ಈ ಭಾಗದ ರೈತರಿಗೆ ಸಾಲ ನೀಡಲು ಸಹಕಾರಿಯಾಗಿದೆ. ಬ್ಯಾಂಕಿನ ನೌಕರ ಸಿಬ್ಬಂದಿ ಹಾಗೂ ಸದಸ್ಯರ ಸಹಕಾರದೊಂದಿಗೆ ಅಭಿವೃದ್ಧಿಯನ್ನು ಸಾಧಿಸಿ ಸಾಧನೆ ಮಾಡಿz್ದೆÃವೆ ಎಂದರು.
ಸಾರ್ವಜನಿಕ ಸಂಸ್ಥೆಗಳನ್ನು ಸ್ವಂತಕ್ಕೆ ಬಳಕೆ ಮಾಡದೆ ಸಾರ್ವಜನಿಕರ ನೆರವಿಗೆ ಮುಂದಾಗಿ ಶ್ರಮಿಸಬೇಕು. ಬ್ಯಾಂಕಿನ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಿದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಿ.ಎಸ್ ಸುರೇಶ್ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಟ್ಟು ೯ ಕೋಟಿ ರೂ. ವಹಿವಾಟು ನಡೆಸಲಾಗುತ್ತಿದೆ. ಸದಸ್ಯರು, ರೈತರು ಠೇವಣಿ ಇಡುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು. ನಿಮ್ಮ ಹಣ ಹಾನಿಯಾಗದಂತೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸಹಕಾರ ಕೇಂದ್ರಬ್ಯಾAಕ್ ಅಧ್ಯಕ್ಷ ಡಿ.ಎಸ್ ಸುರೇಶ್ ಮಾತನಾಡಿ, ಬ್ಯಾಂಕಿನ ನೂತನ ಕಟ್ಟಡಕ್ಕೆ ೮ ಲಕ್ಷ ರೂ. ಅನುದಾನ ನೀಡಲಾಗಿದೆ. ಇದರಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಜೊತೆಗೆ ನಬಾರ್ಡ್ ನಿಬಂಧನೆಗಳು ಬದಲಾಗಿದ್ದರಿಂದ ಈ ಬಾರಿ ಕೃಷಿ ಸಾಲ ವಿತರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ತಾನು ಎಲ್ಲರಿಗಾಗಿ-ಎಲ್ಲರೂ ತನಗಾಗಿ ಎಂಬ ಸಹಕಾರಿ ತತ್ವದೊಂದಿಗೆ ಸಹಕಾರಿ ಕ್ಷೇತ್ರ ಬೆಳೆಯುತ್ತಿದೆ. ಈ ಪತ್ತಿನ ಸಹಕಾರಿ ಸಂಘವನ್ನು ಉತ್ತಮ ಸ್ಥಿತಿಗೆ ತರುವಲ್ಲಿ ಅಧ್ಯಕ್ಷರ ಶ್ರಮ ಅಭಿನಂದನೀಯ ಎಂದರು.
ಸಹಕಾರ ಸಂಘದಲ್ಲಿ ಪೌತಿ ಖಾತೆಗಳ ಸಂಖ್ಯೆ ಹಾಗೇ ಇದ್ದು, ಅವುಗಳನ್ನು ಸಂಬAಧಪಟ್ಟವರ ಹೆಸರಿಗೆ ವರ್ಗಾಯಿಸಿಕೊಂಡು ಖಾತೆ ಮಾಡಿ ಸಹಕಾರ ಸಂಘದಲ್ಲಿ ದೊರೆಯುವ ಸಾಲಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಪತ್ತಿನ ಸಹಕಾರ ಸಂಘ ಪ್ರತಿ ವರ್ಷ ಲಾಭದತ್ತ ಮುನ್ನುಗ್ಗುತ್ತಿದೆ. ಈಗ ಇರುವ ಹಾಗೂ ಹಿಂದಿನ ಆಡಳಿತ ಮಂಡಳಿಯ ಪರಿಶ್ರಮದಿಂದ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ, ಉತ್ತಮ ಸ್ಥಿತಿಗೆ ತಂದಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಶಿವಣ್ಣಗೌಡ, ನಿರ್ದೇಶಕರಾದ ಎಂ.ಡಿ.ರವಿ, ಧರ್ಮಯ್ಯ, ಎಚ್.ಎಲ್.ಬಲರಾಮ್, ಬಸವರಾಜು ಎಂ.ವಿ.ವಿಜಯ ಕುಮಾರ್. ಎಂ.ರಮೇಶ್, ಎಂ.ಸಿ, ಧರ್ಮೇಗೌಡ, ಗೀತಾ, ನಳಿನಾಕ್ಷಿ, ಗ್ರಾಪಂ ಅಧ್ಯಕ್ಷೆ ಸವಿತ ಉಮೇಶ್, ಉಪಾಧ್ಯಕ್ಷ ಉಮೇಶ್, ಪಿಡಿಓ ಸುಮಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net