ಸಹಕಾರ ಸಂಘಗಳು ಯಶಸ್ಸಿಗೆ ನಂಬಿಕೆ ಅಗತ್ಯ, ಮಾಜಿ ಸಭಾಪತಿ ಡಾ. ವೀರಣ್ಣ ಮತ್ತಿಕಟ್ಟಿ ಹೇಳಿಕೆ

23 GJD 6- Priyadarshini
Published on

ಗಜೇಂದ್ರಗಡ: ಸಹಕಾರಿಗಳ ನಡುವೆ ಪರಸ್ಪರ ನಂಬಿಕೆ, ವಿಶ್ವಾಸವಿದ್ದಾಗ ಮಾತ್ರ ಬ್ಯಾಂಕ್ ಅಥವಾ ಸಹಕಾರ ಸಂಘಗಳು ಯಶಸ್ವಿಯಾಗಲು ಸಾಧ್ಯ ಎಂದು ಮಾಜಿ ಸಭಾಪತಿ ಡಾ. ವೀರಣ್ಣ ಮತ್ತಿಕಟ್ಟಿ ಹೇಳಿದರು.


ಪಟ್ಟಣದ ವಿಘ್ನೕಶ್ವರ ವಿಧ್ಯಾವರ್ಧಕ ಸಂಘದಲ್ಲಿ ಭಾನುವಾರ ಪ್ರಿಯದರ್ಶಿನಿ ವಿವಿಧೋದ್ದೇಶಗಳ ಸಹಕಾರಿ ಸಂಘದ 25ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಆರ್ಥಿಕ ಭದ್ರತೆ ಕುಟುಂಬದ ಶಕ್ತಿಯಾಗಿದೆ. ಹೀಗಾಗಿ ನಾವು ಗಳಿಸುವ ಆದಾಯದಲ್ಲಿ ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಳ್ಳುವ ಅಗತ್ಯವಿದೆ. ಹೀಗಾಗಿ ಖರ್ಚು ಮಾಡುವ ಹಣದಲ್ಲಿ ಉಳಿಸುವ ವಿಧಾನವನ್ನು ಅರಿತುಕೊಳ್ಳಬೇಕಿದೆ. ಅಂದಾಗ ಮಾತ್ರ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದರು.
ಸಂಘದ ಉಪಾಧ್ಯಕ್ಷ ಅಪ್ಪು ಮತ್ತಿಕಟ್ಟಿ ಮಾತನಾಡಿ, ಠೇವಣಿದಾರರಿಗೆ ಹಾಗೂ ಗ್ರಾಹಕರ ನಂಬಿಕೆಯ ಪ್ರತಿಬಿಂಬವಾಗಿ ಕೆಲಸ ನಿರ್ವಹಿಸುತ್ತಿರುವ ಬ್ಯಾಂಕ್​ನ ಠೇವಣಿದಾರರಿಗೆ ವಿಮಾ ಯೋಜನೆ, ಸಣ್ಣ ಉದ್ಯಮ, ಗೃಹ ಹಾಗೂ ವಾಹನ ಖರೀದಿಗೆ ಕೋ ಆಪರೇಟಿವ್ ನಿರ್ದೇಶನದಂತೆ ಸಾಲ ನೀಡಲಾಗುತ್ತಿದೆ. ನಮ್ಮ ಸಂಘದ ಮೇಲೆ ಗ್ರಾಹಕರಿಗೆ ನಂಬಿಕೆ ಇರುವುದರಿಂದ ಧಾರವಾಡ ಹಾಗೂ ಹುಬ್ಬಳ್ಳಿಗಳಲ್ಲಿ ಶಾಖೆಗಳನ್ನು ತೆರೆಯಲಾಗಿದೆ ಎಂದರು.


ಸಂಘದ ಕಾರ್ಯದರ್ಶಿ ಅಮರಯ್ಯ ಗೌರಿಮಠ ಮಾತನಾಡಿ,ಬ್ಯಾಂಕ್ 12.67 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದರು.
11 ಜನ ಸಂಘದ ವಿಶೇಷ ಸದಸ್ಯರನ್ನು ಹಾಗೂ ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನಿಸಲಾಯಿತು, ಸಂಘದ ಸದಸ್ಯರ ಪ್ರತಿಭಾವಂತ 17 ಮಕ್ಕಳಿಗೆ 1 ಸಾವಿರ ರೂ.ಗಳ ಸಹಾಯಧನ ನೀಡಿ ಸನ್ಮಾನಿಸಲಾಯಿತು.


ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ರೋಣದ ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ, ಡಾ.ಬಿ.ವಿ. ಕಂಬಳ್ಯಾಳ, ವಿಶ್ವನಾಥಸಾ ಮೇಘರಾಜ, ಮೈಬುಸಾಬ ಕಂದಗಲ್ಲ, ಆಡಳಿತ ಮಂಡಳಿ ಸದಸ್ಯರಾದ ಮಹಾಂತೇಶ ಸೋಮನಕಟ್ಟಿ, ನಾಗೇಶ ಲಕ್ಕಲಕಟ್ಟಿ, ಕಳಕಪ್ಪ ಪಟ್ಟಣಶೆಟ್ಟಿ, ಫಕೀರಶೆಟ್ಟರ ಕುರಡಗಿ, ಲಕ್ಷ್ಮಣ ಮಾಲೋತ್ತರ, ನಿಂಗಬಸಪ್ಪ ಮಾಸ್ತಿ, ಗೀತಾ ವಾಲಿ, ಕಂಠೆಪ್ಪ ಸಂಗನಾಳ, ಅವಿನಾಶ ಕೊಟಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net