ಬಲಿಷ್ಠ ಭಾರತಕ್ಕೆ ಸಹಕಾರ ಸಂಘಗಳೇ ಆಧಾರ

Yaduveer Krishnadatta Wodeyar felicitation
ಶಿವಮೊಗ್ಗದಲ್ಲಿ ಮೈಸೂರು- ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಅವರನ್ನು ಸನ್ಮಾನಿಸಲಾಯಿತು.
Published on

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತದ ಕನಸು ಹೊಂದಿದ್ದಾರೆ. ಅದಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಒಂದು ಸಹಕಾರ ಸಂಘ ಸ್ಥಾಪನೆ ಆಗಬೇಕು. ಆಗ ಮಾತ್ರ ಪ್ರತಿಯೊಬ್ಬರೂ ಸ್ವಾವಲಂಬಿ ಬದುಕು ಸಾಗಿಸಬಹುದು ಎಂಬ ಕಲ್ಪನೆ ಹೊಂದಿದ್ದಾರೆ. ಸಹಕಾರ ಸಂಘಗಳು ವಿಕಸಿತ ಭಾರತದಲ್ಲಿ ಬಲಿಷ್ಠಗೊಳ್ಳಲಿದ್ದು ಅದಕ್ಕಾಗಿ ಶೀಘ್ರವೇ ಸಹಕಾರ ಸಂಘಗಳಿಗೆ ಕೇಂದ್ರ ಸರ್ಕಾರದಿಂದ ಹೊಸದಾಗಿ ನಿಯಮಗಳು ಜಾರಿಗೊಳ್ಳಲಿವೆ ಎಂದರು..
ದೇಶದಲ್ಲಿ ಪ್ರಸ್ತುತ 65 ಸಾವಿರಕ್ಕೂ ಅಧಿಕ ಸಹಕಾರ ಸಂಘಗಳಿದ್ದು ಬಲಿಷ್ಠ ಭಾರತಕ್ಕೆ ಭವಿಷ್ಯದಲ್ಲಿ ಸಹಕಾರ ಸಂಘಗಳೇ ಆಧಾರಸ್ತಂಭ ಆಗಲಿವೆ ಎಂದು ಯದುವೀರ್ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net