

ತೆಲಸಂಗ: ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕಾರಿ ಸಂಘದ ಪಾತ್ರ ಹಿರಿದಾಗಿದೆ ಎಂದು ಶಾಸಕ ಲಕ್ಷ್ಮ್ಮಣ ಸವದಿ ಹೇಳಿದರು.
ಗ್ರಾಮದ ಶ್ರೀ ಬಸವೇಶ್ವರ ಪಿಕೆಪಿಎಸ್ ಹಾಗೂ ವಿವಿಧೋದ್ದೇಶಗಳ ಪಿಕೆಪಿಎಸ್‌ಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ನಾಮ ನಿರ್ದೇಶನಗೊಂಡ ಅಲ್ಲಾಭಕ್ಷ ನದ್ಾ ಹಾಗೂ ಭೀಮಪ್ಪ ಹದ್ನೂರ ಅವರಿಗೆ ಭಾನುವಾರ ಆದೇಶ ಪ್ರತಿ ವಿತರಿಸಿ ಅವರು ಮಾತನಾಡಿದರು.
ರೈತರಿಂದಲೇ ರೈತರಿಗೋಸ್ಕರ ರೈತರೇ ಕಟ್ಟಿ ಬೆಳೆಸಿದ ಸಹಕಾರಿ ಸಂಘಗಳು ಕೃಷಿಕರ ಆರ್ಥಿಕತೆ ವೃದ್ಧಿಸುವ ಕಾಮಧೇನುವಾಗಿದ್ದರಿಂದ ರೈತರು ಶೋಷಣೆಯಿಂದ ಮುಕ್ತವಾಗಿದ್ದಾರೆ. ಸಹಕಾರಿ ಸಂಘಗಳನ್ನು ಉಳಿಸಿ, ಬೆಳೆಸಲು ಎಲ್ಲರೂ ಕೈಜೋಡಿಸೋಣ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೋಘ ಖೊಬ್ರಿ, ತಾಪಂ ಮಾಜಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಶಿವಯೋಗಿ ಹತ್ತಿ, ಧರೆಪ್ಪ ಮಾಳಿ, ಅಶೋಕ ಉಂಡೋಡಿ, ಸಾಬು ಜಮಖಂಡಿ, ಕಾಂಗ್ರೆಸ್ ಮುಖಂಡರು ಹಾಗೂ ಪಿಕೆಪಿಎಸ್‌ಗಳ ನಿರ್ದೇಶಕರು ಪಾಲ್ಗೊಂಡಿದ್ದರು.