

ಶಿವಾನಂದ ಹಿರೇಮಠ ಗದಗ
ತಾಲೂಕಿನ ಹರ್ಲಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕ್ನಲ್ಲಿ(ಪ್ಯಾಕ್ಸ್) ಕೋಟಿಗೂ ಅಧಿಕ ಅವ್ಯವಹಾರ ನಡೆದು ಹಲವು ದಿನಗಳೇ ಕಳೆದರೂ ಆರೋಪಿತರ ಮೇಲೆ ದೂರು ದಾಖಲಿಸಲು ಸಹಕಾರ ಇಲಾಖೆ ಮತ್ತು ಆಡಳಿತ ಮಂಡಳಿ ಹಿಂದೇಟು ಹಾಕಿದೆ. ಈ ಹಿನ್ನೆಲೆ ಪ್ರಕರಣದ ಹಿಂದೆ ಅಧಿಕಾರಿಗಳು ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದ್ದು, ದೂರು ದಾಖಲಿಸದಂತೆ ಮತ್ತು ತನಿಖೆ ನಡೆಯದಂತೆ ಪ್ರಭಾವಿ ಅಧಿಕಾರಿಗಳು ವ್ಯವಸ್ಥಿತ ಜಾಲ ರೂಪಿಸಿದ್ದಾರೆ ಎಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಹೆರಿಗಷ್ಟೇ ಸಹಕಾರ ಬ್ಯಾಂಕಿನ ಕಾರ್ಯದಶಿರ್ಯನ್ನು ಗುರಿಯಾಗಿಸಿದ್ದಾರೆ. ಪ್ರಕರಣದ ಹಿಂದಿರುವ ಈ ವ್ಯವಸ್ಥಿತ ಜಾಲವನ್ನು ಬಯಲಿಗೆಳೆಯ ಬೇಕೆಂಬ ಹಲವು ಸಹಕಾರಿಗಳು ಆಗ್ರಹಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಪಾತ್ರವೇನು ಇಲ್ಲ. ಹರ್ಲಾಪುರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ವ್ಯಾಪ್ತಿಗೆ ಅಧಿಕಾರವಿದೆ ಎಂದು ಸಹಕಾರ ಇಲಾಖೆ ಅಧಿಕಾರಿಗಳು ಪ್ರಕರಣದಿಂದ ಹಿಂದೆ ಸರಿಯುತ್ತಿದ್ದಾರೆ. ಗದಗ ನಗರದ ಕೆಸಿಸಿ ಬ್ಯಾಂಕ್ ಶಾಖೆ ಅಧಿಕಾರಿಗಳು, ಗದಗ ಜಿಲ್ಲಾ ಸಹಕಾರ ಇಲಾಖೆ ಮತ್ತು ಧಾರವಾಡ ವಿಭಾಗೀಯ ಕೆಸಿಸಿ ಬ್ಯಾಂಕ್ ಅಧಿಕಾರಿಗಳು ಪ್ರಕರಣ ಕುರಿತು ಮುತುವಜಿರ್ ವಹಿಸುತ್ತಿಲ್ಲ. ತನಿಖಾ ಜವಾಬ್ದಾರಿಯನ್ನು ಒಬ್ಬರ ಮೇಲೊಬ್ಬರ ಮೇಲೆ ವರ್ಗಾಹಿಸುತ್ತಿದ್ದು, ಪ್ರಕರಣದಿಂದ ನುಣಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಅನುಮಾನ ಮತ್ತಷ್ಟು ದೃಢವಾಗುತ್ತಿದೆ ಹಾಗೂ ಅಮಾಯಕ ಸ್ಥಳಿಯರು ಬ್ಯಾಂಕಿನಲ್ಲಿ ಇಟ್ಟಿರುವ ಠೇವಣಿಗೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಮೂಡುತ್ತಿದೆ.
ಸಹಕಾರಿ ಬ್ಯಾಂಕ್ ಅಕ್ರಮದ ಪರಿಣಾಮ ಅಪೇಕ್ಸ್, ಕೆಸಿಸಿ ಬ್ಯಾಂಕ್ನಿಂದ ಶೂನ್ಯ ಬಡ್ಡಿದರದಲ್ಲಿ ಲಭಿಸುವ ಕೋಟ್ಯಂತರ ರೂ. ಸಾಲ ಸೌಲಭ್ಯವನ್ನು ಅನರ್ಹರು ಭೋಗಿಸಿದ್ದು, ಈ ಆರೋಪಿಗಳು ಶಿೆಯಿಂದ ವಂಚಿತರಾಗುತ್ತಿದ್ದಾರೆ ವಿಪರ್ಯಾಸ.
ಹರಕೆಯ ಕುರಿ:
ಕೋಟಿಗೂ ಅಧಿಕ ಮೊತ್ತದ ಅಕ್ರಮ ಜರುಗಿ, ಅಕ್ರಮದಲ್ಲಿ ಹರಕೆಯ ಕುರಿ ಎಂಬಂತೆ ಎಲ್ಲ ತಪ್ಪುಗಳನ್ನು ಕೇವಲ ಬ್ಯಾಂಕಿನ ಕಾರ್ಯದಶಿರ್ಯೋರ್ವನ ಮೇಲೆ ಎತ್ತಿ ಹಾಕಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಕಾರ್ಯದಶಿರ್ಯಿಂದ 70 ಲಕ್ಷ ರೂ. ಮರುಪಾವತಿ ಮಾಡಿಸಲಾಗಿದೆ. ಇನ್ನೂಳಿದ ಮೊತ್ತಕ್ಕೆ ಕಾರ್ಯದಶಿರ್ ಮನೆ ಹೊಲಗಳ ಮೇಲೆ ಬ್ಯಾಂಕಿನಿಂದ ಬೋಜವನ್ನು ಹಾಕಲಾಗಿದೆ. ಕೋಟಿ ಮೊತ್ತದ ಅಕ್ರಮವು ಆಡಳಿತ ಮಂಡಳಿ ಮತ್ತು ಮೇಲಾಧಿಕಾರಿಗಳ ಕಣ್ತಪ್ಪಿ ಜರುಗುವ ಸಾಧ್ಯತೆಯಿಲ್ಲ. ಹೀಗಾಗಿ ಬಗೆದಷ್ಟು ಅಕ್ರಮ ಆಳಕ್ಕೆ ಹೋಗುತ್ತಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಏನಿದು ಪ್ರಕರಣ?
ಹರ್ಲಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ ಕಳೆದೆರೆಡು ವರ್ಷದಿಂದ ಲೆಕ್ಕಪತ್ರ ವ್ಯವಹಾರ ನಡೆಸದೇ ರೈತರಿಗೆ ಸಿಗಬೇಕಿದ್ದ ಶೂನ್ಯ ಬಡ್ಡಿದರ ಸಾಲವನ್ನು ಹಲವರು ಅಕ್ರಮವಾಗಿ ಬಳಸಿಕೊಂಡಿದ್ದರು. ರೈತರು ಸಾಲ ಪಡೆಯಲು ಸಹಕಾರಿ ಬ್ಯಾಂಕಿಗೆ ತೆರಳಿದ್ದ ಸಂದರ್ಭದಲ್ಲಿ, ಈ ಹಿಂದಿನ ಸಾಲ ಮರುಪಾವತಿಸಿ. ತದ ನಂತರ ಸಾಲ ಮಂಜೂರು ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಈ ಹಿಂದಿನ ಸಾಲಗಳ ಬಾಕಿ ತೀರಿಸಿದ್ದರೂ ಸಾಲ ಇನ್ನೂ ಬಾಕಿ ಇದೆ ಎಂದು ಕೆಲ ಅಧಿಕಾರಿಗಳು ತಿಳಿಸಿದ್ದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು.
ಕೋಟ್:
ಪ್ರಕರಣವನ್ನು ತನಿಖೆ ಮಾಡಿ ವರದಿ ನೀಡುವಂತೆ ಗದಗ ಸಹಕಾರಿ ಉಪನಿಬಂಧಕರಿಗೆ ಪತ್ರ ಬರೆದಿದ್ದೇವೆ. ಬ್ಯಾಂಕ್ ವ್ಯವಹಾರ ಪಾರದರ್ಶಕತೆಯಿಂದ ಕೂಡಿದ್ದರೆ ಬೆಳವಣಿಗೆ ಸಾಧ್ಯ. ಈ ಹಿನ್ನೆಲೆ ಪ್ರಕರಣ ತನಿಖೆಗೆ ಉಪನಿಂಬಂಧಕರಿಗೆ ತಿಳಿಸಿದ್ದೇವೆ.
- ಶಿವಾನಂದ ಹೂಗಾರ, ವ್ಯವಸ್ಥಾಪಕ ನಿರ್ದೇಶಕ
ಕೆಸಿಸಿ ಬ್ಯಾಂಕ್, ಧಾರವಾಡ
ಕೋಟ್:
ಹರ್ಲಾಪುರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಗೆ ಪತ್ರ ಬರೆಯಲಾಗಿದೆ. ತನಿಖಾ ವ್ಯಾಪ್ತಿ ನಮಗೆ ಸಂಬಂದಿಸಿದ್ದಲ್ಲ. ಆಡಳಿತ ಮಂಡಿಳೆಯೇ ಈ ಬಗ್ಗೆ ದೂರು ಸಲ್ಲಿಸಬೇಕು.
- ಎಸ್.ಎಸ್. ಕಬಾಡಿ, ಉಪನಿಬಂಧಕರು, ಗದಗ