ಸಹಕಾರ ಸಂಘಕ್ಕೆ ವಿಜಯಮ್ಮ ಅಧ್ಯಕ್ಷೆ

08arsph1ep
Published on

ಅರಸೀಕೆರೆ : ತಾಲೂಕಿನ ಕೊಂಡೇನಾಳು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವಿಜಯಮ್ಮ ಮಂಜುನಾಥ್ ಅವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಕೃಷ್ಣೇಗೌಡ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ವಿಜಯಮ್ಮ ಹೊರತುಪಡಿಸಿ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಲೀಲಾ ಅವರು ವಿಜಯಮ್ಮ ಅವರನ್ನು ಅಧ್ಯಕ್ಷರೆಂದು ಘೋಷಣೆ ಮಾಡಿದರು. ನಂತರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮುಖಂಡರಾದ ಹೊಸೂರು ಗಂಗಾಧರ, ಪ್ರಸನ್ನ, ನಿರ್ದೇಶಕರಾದ ವಿಜಯಕುಮಾರ್, ಕೃಷ್ಣೇಗೌಡ, ಶಿವಯ್ಯ, ವಕೀಲ ದೇವರಾಜೇಗೌಡ, ಗೋವಿಂದರಾಜಶೆಟ್ಟಿ, ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net