ಮಕ್ಕಳ ಮಾನಸಿಕ ಸದೃಢತೆಗೆ ಸಹಪಠ್ಯ ಚಟುವಟಿಕೆ ಸಹಕಾರಿ

06 RTL 01- MLA BANAKAR
Published on

ರಟ್ಟಿಹಳ್ಳಿ: ಶಾಲೆಯಲ್ಲಿ ಮಕ್ಕಳಿಗೆ ಪಠ್ಯ ಚಟುವಟಿಕೆಯೊಂದಿಗೆ ಸಹಪಠ್ಯ ಚಟುವಟಿಕೆಗಳು ಮಾನಸಿಕವಾಗಿ ಸದೃಢವಾಗಲು ಸಹಕಾರಿಯಾಗುತ್ತದೆ. ಸಹಪಠ್ಯ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚು ಭಾಗವಹಿಸಬೇಕು ಇದರಿಂದ ಅವರಲ್ಲಿ ಸೃಜನಶೀಲತೆ ಬೆಳವಣಿಗೆಯಾಗುತ್ತದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಶ್ರೀ ತರಳಬಾಳು ಜಗದ್ಗುರು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಶಾಂತಿಸಾಗರ ಉತ್ಸವ (ಶಾಲಾ ವಾರ್ಷಿಕೋತ್ಸವ) ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶ್ರೀ ತರಳಬಾಳು ಶಾಲೆಯು ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲತೆ ಮಾಡುತ್ತಿದೆ. ಶಾಲೆಗೆ ಅವಶ್ಯವಿರುವ ಒಟ್ಟು 15 ಗಣಕಯಂತ್ರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು. ಶಾಲೆಯಲ್ಲಿ ಮಕ್ಕಳು ಶಿಕ್ಷಕರು ಮಾಡುವ ಪಾಠಗಳನ್ನು ದೈನಂದಿನವಾಗಿ ಅಭ್ಯಾಸ ಮಾಡಿ ಉತ್ತಮ ಅಂಕ ಪಡೆದು ಶಾಲೆಗೆ ಮತ್ತು ಮನೆಗೆ ಕೀರ್ತಿ ತರಬೇಕು ಎಂದು ಆಶಿಸಿದರು.

ಶಾಲೆಯ ಸಲಹಾ ಸಮಿತಿ ಅಧ್ಯಕ್ಷ ಬಿ.ಎಸ್. ಸಣ್ಣಗೌಡ್ರ ಅಧ್ಯಕ್ಷತೆ ವಹಿಸಿದ್ದರು.

 ಸನ್ಮಾನ ಕಾರ್ಯಕ್ರಮ: ಕಳೆದ ವರ್ಷ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಅಪೂರ್ವ ಅದ್ವಾನಿ, ಸ್ನೇಹಾ ಬಣಕಾರ ಮತ್ತು ವರ್ಷ ಬಿಸ್ಟನಗೌಡ್ರು ಅವರನ್ನು ಸನ್ಮಾನಿಸಲಾಯಿತು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು: ಶಾಲೆಯಲ್ಲಿ ಮಕ್ಕಳು ವಿವಿಧ ಚಲನಚಿತ್ರಗಳ ಗೀತೆಗಳು, ಭರತನಾಟ್ಯ, ಕಿರು ನಾಟಕಗಳು, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.  ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ್ ಎನ್, ಪ್ರೊ.ಬಿ.ಬಿ. ನಂದ್ಯಾಳ, ಎಸ್.ಆರ್. ದೊಡ್ಡಬಸಪ್ಪನವರ್, ದೊಡ್ಡಗೌಡ ಮರಿಗೌಡ್ರ, ಸುರೇಶ ಸೊರಟೂರ, ತ್ಯಾಗರಾಜ ಬಣಕಾರ, ರವೀಂದ್ರ ಮುದಿಯಪ್ಪನವರ, ಬಸನಗೌಡ ಚಿಕ್ಕಗೌಡ್ರ, ರಾಮಣ್ಣ ಗೌರಕ್ಕನವರ, ಆರ್.ಎನ್. ಗಂಗೋಳ, ಈರನಗೌಡ ಮಾಜಿಗೌಡ್ರ, ಸತೀಶ ಬಣಕಾರ, ಮುಖ್ಯ ಶಿಕ್ಷಕರು ಜಿತೇಂದ್ರಕುಮಾರ ಎಚ್.ಬಿ ಮತ್ತು ಶಿಕ್ಷಕರು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net