ಸಹಪಠ್ಯ ಚಟುವಟಿಕೆ ಕಲಿಕೆಗೆ ಸಹಕಾರಿ

P PURA PAGADALABANDE 29
Published on

ಪರಶುರಾಮಪುರ: ಮಕ್ಕಳ ಕಲಿಕೆ ಪರಿಣಾಮಕಾರಿಯಾಗಲು ಸಹಪಠ್ಯ ಚಟುವಟಿಕೆ ಅತೀ ಅವಶ್ಯಕ ಎಂದು ಗ್ರಾಪಂ ಅಧ್ಯಕ್ಷ ಕಲ್ಲೇಶಪ್ಪ ಹೇಳಿದರು.

ಸಮೀಪದ ಪಗಡಲಬಂಡೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಠ್ಯ, ಪಠ್ಯೇತರ ಚಟುವಟಿಕೆ ಸೇರಿ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಪಂಚಾಯಿತಿ ವತಿಯಿಂದ ಅಗತ್ಯ ಸಹಕಾರ ನೀಡಲು ಚಿಂತನೆ ನಡೆಸಲಾಗುವುದು ಎಂದರು.

ಶಾಲಾ ಸಮಿತಿಯ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಹಂತದ ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಅವರಲ್ಲಿನ ಸುಪ್ತ ಪ್ರತಿಭೆ ಹೊರತರುವ ಕೆಲಸ ಶಿಕ್ಷಕರು ಮಾಡಬೇಕು ಎಂದು ಹೇಳಿದರು.

ಮುಖ್ಯಶಿಕ್ಷಕರಾದ ಷಣ್ಮುಖಪ್ಪ, ಮಲ್ಲಿಕಾರ್ಜುನ, ನಿವೃತ್ತ ಡಿಡಿಪಿಐ ಜಿ.ನಾಗೇಂದ್ರಪ್ಪ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಬಸವರಾಜು ಮಾತನಾಡಿದರು.

ಗ್ರಾಪಂ ಉಪಾಧ್ಯಕ್ಷೆ ತಿಪ್ಪಮ್ಮ, ಸದಸ್ಯರಾದ ವಿಜಯಕುಮಾರ, ತಿಮ್ಮರಾಯಪ್ಪ, ತಿಪ್ಪಮ್ಮ, ಸಾವಿತ್ರಮ್ಮ, ಅಜಿತ್‌ಕುಮಾರ, ರೇಷ್ಮೆ ಇಲಾಖೆಯ ನಿವೃತ್ತ ಅಧಿಕಾರಿ ರುದ್ರಮುನಿಯಪ್ಪ, ಬಿ ಶಂಕರಪ್ಪ, ಸಿಆರ್‌ಪಿಗಳಾದ ಎನ್.ಪ್ರಕಾಶ, ನೀಲಕಂಠಪ್ಪ, ಶಿಕ್ಷಕಿ ಷಾಹಿನಾ ಜಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net