

ಬೆಳಗಾವಿ: ಸಂವಿಧಾನ ರಕ್ಷಿಸಿ-ಪ್ರಜಾಪ್ರಭುತ್ವ ಉಳಿಸಿ "ಅಂಗವಾಗಿ ರಾಷ್ಟ್ರಧ್ವಜ ದೊಂದಿಗೆ ಕಾಂಗ್ರೆಸ್ ಕಚೇರಿ ಯಿಂದ ಚೆನ್ನಮ್ಮ ವೃತ್ತ ಮತ್ತೆ ಕಾಂಗ್ರೆಸ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ ಅವರ ನೇತೃತ್ವ ದಲ್ಲಿ ಇಂದು ನೆರವೇರಿತು.
ಕೇಂದ್ರ ಸರಕಾರದ ಕುತಂತ್ರ ಹಾಗು ವಾಮ ಮಾರ್ಗ ಮತ್ತು ಚುನಾವಣಾ ಆಯೋಗ ದ ನಿರ್ಲಕ್ಷ್ಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರಾಹುಲ್ ಗಾಂಧಿ ಯವರು ಮತದಾರರ ಪಟ್ಟಿ ಯಲ್ಲಿ ಆಗಿರುವ ಅಕ್ರಮಗಳನ್ನ ಬಹಿರಂಗ ಮಾಡಿದ್ದಾರೆ, ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ ಎಂದು ಜನತೆಗೆ ಕರೆ ನೀಡಿದ್ದಾರೆ.
ಜನರು ಜಾಗೃತ ರಾಗಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಲಿ ಎಂದು ಹೋರಾಟ ಮಾಡುತ್ತಿದ್ದಾರೆ ಎಂದು ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ರ್ಯಾಲಿ ಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮೃಣಾಲ್ ಹೆಬ್ಬಾಳಕರ, ರಾಜ ಸಲೀಂ ಖಾಸಿಂ ನವರ ಇತರರಿದ್ದರು.