

ಬೆಳಗಾವಿ: ಬರ ಪರಿಹಾರ, ರಾಜ್ಯದ ಪಾಲಿನ ಅನುದಾನ ನೀಡದಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ನಗರದ ಚನ್ನಮ್ಮ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬರ ಪರಿಹಾರಕ್ಕಾಗಿ ಸೆಪ್ಟೆಂಬರ್‌ನಲ್ಲಿ ಮನವಿ ಸಲ್ಲಿಸಲಾಗಿದೆ. ಬರ ಅಧ್ಯಯನ ತಂಡ ಅಕ್ಟೋಬರ್‌ನಲ್ಲಿ ರಾಜ್ಯಕ್ಕೆ ಭೇಟಿ ನೀಡಿದೆ. ಅದೇ ತಿಂಗಳು ಕೇಂದ್ರಕ್ಕೆ ₹17,901 ಕೋಟಿ ಪರಿಹಾರ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಆದರೆ, ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಬರಪೀಡಿತ ತಾಲೂಕುಗಳು 223. ಸಂಭವಿಸಿರುವ ನಷ್ಟ ₹33,770 ಕೋಟಿ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ರಾಜ್ಯ ಸರ್ಕಾರ ಕೇಳುತ್ತಿರುವುದು ₹18,177 ಕೋಟಿ ಪರಿಹಾರ. ನಯಾಪೈಸೆ ಬಿಡುಗಡೆ ಮಾಡದೆ ಕೇಂದ್ರ ಸತಾಯಿಸುತ್ತಿದೆ ಎಂದು ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಆರ್.ಪಿ. ಪಾಟೀಲ, ಎ.ಸನದಿ ಇತರರಿದ್ದರು.