

ಮಡಿಕೇರಿ: ಲಕ್ಡಿಕೋಟೆಯಲ್ಲಿ ೧೮ನೇ ಶತಮಾನದಲ್ಲಿ ೩ನೇ ಮತ್ತು ೪ನೇ ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಹೋರಾಡಿ ಹುತಾತ್ಮರಾದ ಕೊಡವ ಯೋಧರಿಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಭಾನುವಾರ ಗೌರವ ನಮನ ಸಲ್ಲಿಸಿತು.
ಕೊಡವ ಯೋಧರಿಗೆ ಗೌರವ ಅರ್ಪಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಆಂಗ್ಲೋ-ಮೈಸೂರು ಯುದ್ಧಗಳು ಭಾರತೀಯ ಇತಿಹಾಸದಲ್ಲಿ ಮಹತ್ವದ ಘಟನೆಗಳಾಗಿದ್ದು, ಕೊಡವ ಯೋಧರ ಕೊಡುಗೆಯನ್ನು ಗುರುತಿಸುವುದು ನಮ್ಮ ಕರ್ತವ್ಯವಾಗಿದೆ. ಪ್ರಾರ್ಥನೆ ಮತ್ತು ನಮನ ಸಲ್ಲಿಸುವ ಕಾರ್ಯವು ಕೊಡವ ಯೋಧರ ಶೌರ್ಯ, ತ್ಯಾಗ ಹಾಗೂ ಪರಂಪರೆಯನ್ನು ಗೌರವಿಸುವ ಒಂದು ಸಂಪ್ರದಾಯವಾಗಿದೆ. ಸಮುದಾಯದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಸಂಪರ್ಕ ಸಾಧಿಸಲು ಇದು ಅರ್ಥಪೂರ್ಣ ಮಾರ್ಗವಾಗಿದೆ ಎಂದರು.
ಈ ಸಂದರ್ಭ ಹೈಕೋರ್ಟ್ ವಕೀಲ ಎ.ಕೆ.ವಸಂತ್ ಅಮೀನ್, ಕಾಂಡೇರ ಸುರೇಶ್, ವಸಂತ್ ಆಳ್ವ, ವಿನಯ್ ಹಾಗೂ ಗಿರೀಶ್ ಹಾಜರಿದ್ದು ಗೌರವ ಅರ್ಪಿಸಿದರು.