

ಮಡಿಕೇರಿ:
ವಿಶ್ವರಾಷ್ಟç ಸಂಸ್ಥೆಯ ಅಂತರರಾಷ್ಟಿçÃಯ ಮಾತೃಭಾಷಾ ದಿನದ ಅಂಗವಾಗಿ ಮಡಿಕೇರಿಯಲ್ಲಿ ಶುಕ್ರವಾರ ಸತ್ಯಾಗ್ರಹ ನಡೆಸಿದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು ಮತ್ತು ವಿಶ್ವರಾಷ್ಟç ಸಂಸ್ಥೆಯ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಬೇಕೆಂದು ಒತ್ತಾಯಿಸಿತು.
ಈ ವೇಳೆ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವ ಭಾಷೆಯನ್ನು ಸಂರಕ್ಷಿಸುವ ಅಗತ್ಯವಿದ್ದು, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ಸೇರಿಸಬೇಕು ಮತ್ತು ವಿಶ್ವರಾಷ್ಟç ಸಂಸ್ಥೆಯ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಬೇಕು. ಆದಿಮಸಂಜಾತ ಕೊಡವ ಯೋಧ ಬುಡಕಟ್ಟು, ಕೊಡವ ಪರ್ವತ ಬುಡಕಟ್ಟು ಸಮುದಾಯವನ್ನು ಕೊಡವ ಪ್ರದೇಶದ "ಆದಿ ಬುಡಕಟ್ಟು" ಎಂದು ಗುರುತಿಸಬೇಕು ಮತ್ತು ಕೊಡವ ಬುಡಕಟ್ಟು ಜನಾಂಗವನ್ನು ಸಂವಿಧಾನದ ಎಸ್ಟಿ ಪಟ್ಟಿಯಲ್ಲಿ ಸೇರಿಸಬೇಕು. ವಿಶ್ವ ರಾಷ್ಟç ಸಂಸ್ಥೆಯ ವಿಶ್ವವಿದ್ಯಾನಿಲಯದಲ್ಲಿ ಕೊಡವಾಲಜಿ ಅಥವಾ ಕೊಡವಶಾಸ್ತç ಪೀಠ ತೆರೆಯಬೇಕು. ಕೊಡವ ಬುಡಕಟ್ಟು ಜನಾಂಗದವರ ಭೂಮಿಯನ್ನು ಉಳಿಸಲು ಕೊಡವರನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಕೊಡಗು ಜಿಲ್ಲೆಯಲ್ಲಿ ಕೊಡವ ಭಾಷೆಯನ್ನು ಆಡಳಿತ ಭಾಷೆಯಾಗಿ ಪರಿಗಣಿಸಬೇಕು. ಸಂವಿಧಾನದ 347ನೇ ವಿಧಿಯಡಿಯಲ್ಲಿ ನಿಯಮಿತ ಪಠ್ಯಕ್ರಮದಲ್ಲಿ ಸೇರಿಸಬೇಕು. ಕರ್ನಾಟಕ ರಾಜ್ಯದ ಪಠ್ಯಕ್ರಮದಲ್ಲಿ ಆದಿಮಸಂಜಾತ ಕೊಡವ ಭಾಷೆಯನ್ನು ಮೂರನೇ ಭಾಷೆಯಾಗಿ ಪರಿಗಣಿಸಬೇಕು.
ಆದಿಮಸಂಜಾತ ಕೊಡವ ಜನಾಂಗವನ್ನು ನಿಯಮಿತ ಭಾಷಾ ಸೂಕ್ಷö್ಮ ಜನಾಂಗ ಎಂದು ಗುರುತಿಸಿ ಕೊಡವರು ಕರ್ನಾಟಕದಲ್ಲಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಟ್ಯಾಗ್ ನೀಡಬೇಕು. ಕೊಡವ ಬುಡಕಟ್ಟು ಜನಾಂಗದ ಜನಪದೀಯ ಹಬ್ಬಗಳಾದ ಪುತ್ತರಿ, ಕೈಲ್‌ಪೊಳ್ದ್, ಕಾವೇರಿ ಚಂಗ್ರಾAದಿ, ಎಡ್ಮಾ÷್ಯರ್, ಕಕ್ಕಡ ಪದ್‌ನೆಟ್‌ಗಳನ್ನು ಇತರ ಮಾನ್ಯತೆ ಪಡೆದ ಹಬ್ಬಗಳಿಗೆ ಸಮಾನವಾಗಿ ರಾಜ್ಯ ರಜಾದಿನಗಳೆಂದು ಘೋಷಿಸಬೇಕು. 1956 ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಕೊಡಗಿನ ಎಲ್ಲಾ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಕೊಡವ ಸ್ಥಳಗಳ ಹಳೆಯ ಜನಪದ ಹೆಸರುಗಳನ್ನು ಮರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂಬAಧ ಮನವಿಪತ್ರವನ್ನು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಕಲಿಯಂಡ ಮೀನಾ ಕಾರ್ಯಪ್ಪ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ರೇಖಾ ನಾಚಪ್ಪ, ಪಟ್ಟಮಾಡ ಲಲಿತಾ ಗಣಪತಿ, ಮುದ್ದಿಯಡ ಲೀಲಾವತಿ, ಚೋಳಪಂಡ ಜ್ಯೋತಿ ನಾಣಯ್ಯ, ಕರವಂಡ ಸರಸು, ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ್, ಅಜ್ಜಿಕುಟ್ಟೀರ ಲೋಕೇಶ್, ಕಿರಿಯಮಾಡ ಶೆರಿನ್ ಮತ್ತಿತರರು ಈ ಸಂದರ್ಭ ಇದ್ದರು.