ಸಿಎನ್‌ಸಿಯಿಂದ 15ನೇ ವರ್ಷದ ಗನ್ ಕಾರ್ನಿವಲ್

CNC
Published on

ಮಡಿಕೇರಿ

ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮೂರ್ನಾಡಿನ ಬಲಂಬೇರಿಯ ರೆಸಾರ್ಟ್ ಒಂದರಲ್ಲಿ 15ನೇ ವರ್ಷದ ಗನ್ ಕಾರ್ನಿವಲ್- ತೋಕ್ ನಮ್ಮೆ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.

ಬಂದೂಕುಗಳನ್ನು ಹೂವುಗಳಿಂದ ಅಲಂಕರಿಸಿ, ವಾಹನದಲ್ಲಿರಿಸಿ ದುಡಿಕೋಟ್ ಪಾಟ್‌ನೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗಾಗಿ ಶೂಟಿಂಗ್ ಸ್ಪರ್ಧೆಗಳು ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಕೊಡವತಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ನಂದಿನೆರವAಡ ನಿಶಾ ಅಚ್ಚಯ್ಯ ಅವರು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ವಿರಚಿತ ತೋಕ್‌ಪಾಟ್ ಹಾಡಿದರು. ಎನ್.ಯು. ನಾಚಪ್ಪ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಂದೂಕು ಆದಿಮ ಸಂಜಾತ ಕೊಡವರ ಜನಾಂಗದ ಧಾರ್ಮಿಕ-ಜನಾಂಗೀಯ ಸಂಸ್ಕಾರವಾಗಿದೆ. ತೋಕ್ ಕೊಡವರ ಪ್ರಾಚೀನ ಹೆಮ್ಮೆಯ ಹೆಗ್ಗುರುತಾಗಿದ್ದು, ಪೂರ್ವಕಾಲದ ಸಂಪ್ರದಾಯ, ಆಚರಣೆಗಳು ಮತ್ತು ಜಾನಪದ ಕಾನೂನು ವ್ಯವಸ್ಥೆಗಳನ್ನು ಪ್ರದರ್ಶಿಸಲು ಹಾಗೂ ಸಂರಕ್ಷಿಸಲು ಸಿಎನ್‌ಸಿ ಪ್ರತಿವರ್ಷ ತೋಕ್ ನಮ್ಮೆಯನ್ನು ಸಾರ್ವಜನಿಕ ಗನ್ ಕಾರ್ನಿವಲ್ ನ್ನಾಗಿ ಆಚರಿಸಿಕೊಂಡು ಬರುತ್ತಿದೆ ಎಂದು ಎನ್.ಯು.ನಾಚಪ್ಪ ಈ ವೇಳೆ ತಿಳಿಸಿದರು.

ಆದಿಮ ಸಂಜಾತ ಕೊಡವ ಜನಾಂಗೀಯ ಹೆಗ್ಗುರುತು ಭೂಮಿ ತಾಯಿ, ಪ್ರಕೃತಿ ಮಾತೆ, ಜಲದೇವತೆ ಪವಿತ್ರ ಕಾವೇರಿ ನದಿ, ಬುಡಕಟ್ಟು ಪ್ರಾಚೀನತೆ ಜನಾಂಗ, ದೈವಿಕ ವನಪ್ರದೇಶಗಳು, ಪೂಜನೀಯ ಮಂದ್‌ಗಳು, ಪಾರಂಪರಿಕ ಸಾಮುದಾಯಿಕ ಭೂಮಿಗಳು, ಅಲಿಖಿತ ಮೌಖಿಕ ಜಾನಪದ-ಕಾನೂನು ವ್ಯವಸ್ಥೆಗಳು ಮತ್ತು ಬಂದೂಕು ಸಂಸ್ಕöÈತಿಯೊAದಿಗೆ ಆಳವಾಗಿ ಹೆಣೆದುಕೊಂಡಿದೆ. ಇವು ಕೊಡವ ಜನಾಂಗದ ಭೂತ, ವರ್ತಮಾನ ಮತ್ತು ಭವಿಷ್ಯದಿಂದ ಬೇರ್ಪಡಿಸಲಾಗದ ಕೊಡವ ಪರಂಪರೆಯ ಶ್ರೀಮಂತ ಭಂಡಾರಗಳಾಗಿವೆ.

ಹಳೇ ಮೈಸೂರಿನ ಪ್ರಬಲ ಸಮುದಾಯಗಳಿಂದ ಪ್ರಭಾವಿತವಾಗಿರುವ ಸರ್ಕಾರಿ ಅಂಗಗಳು ಕೊಡವ ಹಕ್ಕುಗಳನ್ನು ದುರ್ಬಲಗೊಳಿಸಲು ಸಂವಿಧಾನೇತರ ಶಕ್ತಿ ಕೇಂದ್ರಗಳನ್ನು ಬಳಸಿಕೊಂಡಿವೆ. ಅವರು ಕೊಡವ ಅಸ್ತಿತ್ವ ಮತ್ತು ಗುರುತನ್ನು ನಿರರ್ಥಕಗೊಳಿಸಲು ಮತ್ತು ಕಾನೂನುಬಾಹಿರಗೊಳಿಸಲು ಸಂಚು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ನಂದೇಟಿರ ಕವಿತಾ ಸುಬ್ಬಯ್ಯ, ಕಲಿಯಂಡ ಮೀನಾ ಪ್ರಕಾಶ್, ಲೆ.ಕರ್ನಲ್ ಬಿ.ಎಂ.ಪಾರ್ವತಿ, ಬೊಟ್ಟಂಗಡ ಸವಿತಾ ಗಿರೀಶ್, ಪುಲ್ಲೇರ ಸ್ವಾತಿ ಕಾಳಪ್ಪ, ಮನೆಯಪಂಡ ಕಾಂತಿ ಸತೀಶ್, ಬಿದ್ದಂಡ ಉಷಾ ದೇವಮ್ಮ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಅರೆಯಡ ಸವಿತಾ ಗಿರೀಶ್, ಮಂದಪAಡ ರಚನಾ ಮತ್ತಿತರರು ಇದ್ದರು.

ಇದೇ ಸಂದರ್ಭ ಪಂಜೆ ಮಂಗೇಶ ರಾವ್, ಜಿ. ಯದುಮಣಿ ಹಾಗೂ ಡಿ.ಎನ್.ಕೃಷ್ಣಯ್ಯ ಅವರಿಗೆ ಮರಣೋತ್ತರ "ಕೊಡವ ರತ್ನ" ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಹರ್ಷ.ಸಿ.ಆರ್., ಡಾ.ಎಂ.ಎನ್. ರವಿಶಂಕರ್, ಕಾಂಡೇರ ಕೆ.ಸುರೇಶ್, ಬಾಚರಣಿಯಂಡ ರಾಣು ಅಪ್ಪಣ್ಣ, ಕೊಡಂದೇರ ಉತ್ತರೆ ತಿಮ್ಮಯ್ಯ ಪಟ್ಟಮಾಡ ಲಲಿತಾ ಗಣಪತಿ, ಹಂಚೆಟ್ಟಿರ ನಯನ ಚಂಗಪ್ಪ, ಮುಕ್ಕೊಡ್ಲು ವ್ಯಾಲಿ ಡ್ಯೂ ಕಲ್ಚರಲ್ ಸಂಸ್ಥೆ ಮುಕ್ಕಾಟಿರ ಎ. ವಸಂತ್, ಸುಂಟಿಕೊಪ್ಪ, ಬೊಟ್ಟೋಳಂಡ ಜಿ. ಮಿಟ್ಟುಚಂಗಪ್ಪ, ಉದಿಯಂಡ ಚಂಗಪ್ಪ, ಬೊಳ್ಳಾರ್ಪಂಡ ಸಾಬು ಚಂಗಪ್ಪ, ನಂದಿನೆರವAಡ ಅಪ್ಪಯ್ಯ, ಪೆಮ್ಮುಡಿಯಂಡ ವೇಣು ಅಪ್ಪಣ್ಣ ಅವರಿಗೆ ಕೊಡವ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ನೆಲ್ಲಮಕ್ಕಡ ವಿವೇಕ್ ಮೊದಲ ಸ್ಥಾನ ಗಳಿಸಿದರಲ್ಲದೆ ಮ್ಯಾನ್‌ಆಫ್ ದಿ ಇವೆಂಟ್ ಮೆಡಲ್‌ಗೆ ಭಾಜನರಾದರು. ಬೊಟ್ಟಂಗಡ ಸಮಿತಾ ಗಿರೀಶ್, ಪಟ್ಟಚರವಂಡ ಗಿರಿ ರಾಜೇಶ್, ಪೆಮ್ಮುಡಿಯಂಡ ವೇಣು ಉತ್ತಪ್ಪ, ಸೋಮಯಂಡ ರೇಷಾ, ಮಳೇಯಂಡ ವಿಜು, ಕೂಪದಿರ ಸಾಬು, ಅಜ್ಜಿಕುಟ್ಟೀರ ಅಪ್ಪಯ್ಯ, ಅರೆಯಡ ಸಾವನ್ ವಿಜೇತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net