ನ.1ರಂದು ಸಿಎನ್‌ಸಿಯಿಂದ ದೆಹಲಿಯಲ್ಲಿ ಸತ್ಯಾಗ್ರಹ

cnc
Published on

ಮಡಿಕೇರಿ

ಸಂವಿಧಾನದ 6 ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಮೂಲಕ ಸ್ವ-ನಿರ್ಣಯ ಮತ್ತು ಸ್ವ-ಆಡಳಿತದ ಹಕ್ಕೊತ್ತಾಯಗಳ ಪರ ಹೋರಾಟ ನಡೆಸುತ್ತಿರುವ ಸಿಎನ್‌ಸಿ ಸಂಘಟನೆ ನ.1ರಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಸಲಿದೆ.

ಈ ಸಂಬAಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಷ್ಟçದ ಎದುರು ನಮ್ಮ ನೋವು ಮತ್ತು ಸಂಕಷ್ಟವನ್ನು ಎತ್ತಿ ತೋರಿಸಲು ಹಾಗೂ ಜಾಗತಿಕ ಧರ್ಮ ಪ್ರಜ್ಞೆಯನ್ನು ಜಾಗೃತಿಗೊಳಿಸಲು ನ.1 ರಂದು ರಾಷ್ಟç ರಾಜಧಾನಿಯಲ್ಲಿ ಶಾಂತಿಯುತವಾಗಿ ಸತ್ಯಾಗ್ರಹ ನಡೆಸಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಿದ್ದೇವೆ.

ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರ ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು. ಸಿಎನ್‌ಸಿ ಸಂಘಟನೆ ಕೊಡವರ ಪರ ಪ್ರತಿಪಾದಿಸಿರುವ ಬೇಡಿಕೆಗಳನ್ನು ಸಾಂವಿಧಾನಿಕ ಪರಿಹಾರವಾಗಿ ಮೂಲಭೂತ ಹಕ್ಕುಗಳ ಅಡಿಯಲ್ಲಿ ಪರಿಗಣಿಸಬೇಕು ಮತ್ತು ಕೊಡವಲ್ಯಾಂಡ್ ಅನ್ನು ಸಂವಿಧಾನದ 6 ನೇ ಶೆಡ್ಯೂಲ್ ಅಡಿಯಲ್ಲಿ ತರಬೇಕು.

ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರನ್ನು ಪರಿಶಿಷ್ಟ ಪಂಗಡಗಳ ವರ್ಗೀಕರಣದ ಅಡಿಯಲ್ಲಿ ಸೇರಿಸಬೇಕು ಮತ್ತು ಸಿಖ್ಖರ ಕಿರ್ಪಾಣ್‌ಗೆ ಸಮಾನವಾಗಿ ಸಂವಿಧಾನದ ಆರ್ಟಿಕಲ್ 25 ಮತ್ತು 26 ರಡಿಯಲ್ಲಿ ಕೊಡವ ಧಾರ್ಮಿಕ ಸಂಸ್ಕಾರ ಗನ್ ತೋಕ್ ಹಕ್ಕನ್ನು ಅನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳಲು ಸಾಂವಿಧಾನಿಕ ಕಾರ್ಯವಿಧಾನಗಳನ್ನು ಪ್ರಾರಂಭಿಸಬೇಕು. ಕೊಡವರನ್ನು ಅಳಿವಿನಂಚಿನಲ್ಲಿರುವ ಮತ್ತು ಕ್ಷೀಣಿಸುತ್ತಿರುವ ಸಮುದಾಯವೆಂದು ಗುರುತಿಸಿ ಖಚಿತಪಡಿಸಬೇಕು. 2026–27 ರಲ್ಲಿ ನಡೆಯುವ 16ನೇ ರಾಷ್ಟಿçÃಯ ಜನಸಂಖ್ಯಾ ಗಣತಿ ಸಂದರ್ಭ ಕೊಡವರಿಗೆ ಪ್ರತ್ಯೇಕ ಕಾಲಂ ಅಳವಡಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net