ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿಕೆ; ಸಿಎಂ ಪತ್ನಿ ಸೈಟ್ ವಾಪಸ್ ಕೊಡುವುದು ಯು ಟರ್ನ್ ಅಲ್ಲ

Santosh Lad 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಮುಡಾ ಸೈಟ್‌ಗಳನ್ನು ವಾಪಸ್ ಕೊಡುವುದರಲ್ಲಿ ತಪ್ಪಿಲ್ಲ. ಪತಿಯ ಪ್ರತಿಷ್ಠೆ ಮತ್ತು ಮರ್ಯಾದೆಗೋಸ್ಕರ ಮುಖ್ಯ ಎಂದು ಮರಳಿ ಕೊಟ್ಟಿದ್ದಾರೆ ವಿನಃ ಯು ಟರ್ನ್ ಅಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅಽಕಾರವಽಯಲ್ಲಿ ಬಿಜೆಪಿಯವರೇ ಮುಡಾ ಸೈಟ್ ಕೊಟ್ಟಿದ್ದರು. ವಾಪಸ್ ಕೊಡಬಾರದು ಎಂಬು ರೂ¯್ಸï‌ಗಳೇನೂ ಇಲ್ಲ. ಸಿಎಂ ಪತ್ನಿ ಒಂದು ದಿನವೂ ಸಾರ್ವಜನಿಕವಾಗಿ ಹೊರಗೆ ಬಂದವರಲ್ಲ. ಅವರಿಗೆ ಮುಡಾದಿಂದ ಪರಿಹಾರವಾಗಿ ಸೈಟ್‌ಗಳನ್ನು ಕೊಡಲಾಗಿತ್ತು. ಇದರಲ್ಲಿ ದುಡ್ಡಿನ ವ್ಯವಹಾರ ನಡೆದಿಲ್ಲ. ಇದೀಗ ಲೋಕಾಯುಕ್ತ, ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಆಗುತ್ತಿದೆ. ಕರ್ಮ ರಿಟರ್ನ್ ಬಂದೇ ಬರುತ್ತದೆ ಎಂದರು.
ಚುನಾವಣಾ ಬಾಂಡ್ ಪ್ರಕರಣದಲ್ಲಿ ಎಂಟೂವರೆ ಸಾವಿರ ಕೋಟಿ ರೂಪಾಯಿ ಹಗರಣ ಆಗಿದೆ. ಅಲ್ಲೇಕೆ ಇಡಿ ವಿಚಾರಣೆ ಮಾಡುವುದಿಲ್ಲ? ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಹಗರಣದಲ್ಲಿ ಭಾಗಿಯಾದವರನ್ನು ಬಂಽಸಬೇಕು. ಬಿಜೆಪಿಯವರು ಇಡಿಯನ್ನು ಬಳಸಿಕೊಂಡು ಮುಖ್ಯಮಂತ್ರಿ ರಾಜೀನಾಮೆ ಕೇಳುತ್ತಿದ್ದಾರೆ. ಕೇಂದ್ರದ 29 ಕ್ಯಾಬಿನೆಟ್ ಸಚಿವರ ಮೇಲೆ ಕ್ರಿಮಿನಲ್ ಕೇಸ್, ಕೊಲೆ ಕೇಸ್, ರೇಪ್ ಕೇಸ್‌ಗಳಿವೆ. ಹಾಗಾದರೆ ಅವರು ರಾಜೀನಾಮೆ ಕೊಡೋದು ಬೇಡವೇ? ಕೇಂದ್ರ ಸಚಿವ ಕುಮಾರಸ್ವಾಮಿ ಮೇಲೂ ಪ್ರಕರಣವಿದ್ದು, ಅವರು ರಾಜೀನಾಮೆ ಕೊಡಬೇಕಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಅಧಿಕಾರ ಇದೆ. ಅವರು ಈ ಬಗ್ಗೆ ಮಾತನಾಡುವುದಿಲ್ಲ ಎಂದರು.
ಯಡಿಯೂರಪ್ಪ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದರ ಹಿಂದೆ ಮೈನಿಂಗ್ ಪ್ರಕರಣದಲ್ಲಿ ಜಾರ್ಜ್ಶೀಟ್ ಆಗಿದ್ದ ಕಾರಣವಿತ್ತು. ಬಿಜೆಪಿಯವರು 14 ಸೈಟ್‌ಗಳ ಬಗ್ಗೆ ಮಾತನಾಡುತ್ತಿದ್ದಾರೆ. 124 ಸೈಟ್‌ಗಳ ಬಗ್ಗೆ ಮಾತೂ ಇಲ್ಲ, ವಿಚಾರಣೆಯೂ ಇಲ್ಲ. ಬಿಜೆಪಿಯವರ ಲೆಕ್ಕದಲ್ಲಿ 124 ಸೈಟ್‌ಗಳನ್ನು ಪಡೆದವರು ಕಾನೂನಾತ್ಮಕವಾಗಿ ಪಡೆದಿದ್ದಾರಾ? ಇದರಲ್ಲಿ ರಾಜಕೀಯ ಕುತಂತ್ರ ಇದ್ದು, ಸಿಎಂ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net