

ಮೈಸೂರು: ನಂಜನಗೂಡಿಗೆ ನ.28 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ತಿಳಿಸಿದ್ದಾರೆ.
ನಂಜನಗೂಡು ಪಟ್ಟಣದ ಮಾರ್ಗವಾಗಿ ಸಂಚರಿಸುವ ಭಾರಿ ವಾಹನಗಳ ಸಂಚಾರ ಮಾರ್ಗವನ್ನು ಅಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ಬದಲಾವಣೆ ಮಾಡಲಾಗಿದೆ. ಚಾಮರಾಜನಗರದ ಕಡೆಯಿಂದ ಮೈಸೂರಿಗೆ ಹೋಗುವ ಬಸ್, ಲಾರಿ, ಹಾಗೂ ಇತರೆ ಭಾರಿ ವಾಹನಗಳು ಗೋಳೂರು ಕ್ರಾಸ್-ತಿ.ನರಸೀಪುರ-ಸುತ್ತೂರು-ಹೊಸಕೋಟೆ ಮಾರ್ಗವಾಗಿ ತೆರಳಬೇಕು, ಮೈಸೂರಿನಿಂದ ಚಾಮರಾಜ ನಗರಕ್ಕೆ ತೆರಳುವ ಭಾರಿ ವಾಹನಗಳು ತಿ.ನರಸೀಪುರ-ಮೂಗೂರು-ಸಂತೆಮರಳ್ಳಿ ಮಾರ್ಗವಾಗಿ ಸಂಚರಿಸಬೇಕು. ಬೈಕ್, ಕಾರು ಹಾಗೂ ಇತರ ಲಘು ವಾಹನಗಳು ದೈನಂದಿನ ಮಾರ್ಗದಲ್ಲೇ ಸಂಚರಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.