ದಸರಾ ಉದ್ಘಾಟನೆ ವಿಚಾರದಲ್ಲಿ ಸಿಎಂ ಹುಚ್ಚಾಟ

byv
Published on

ಶಿವಮೊಗ್ಗ: ವಿಕಸಿತ ಭಾರತದ ಕನಸು ನನಸಾಗಲು ಜಿಎಸ್‌ಟಿ ಸಹಕಾರ ನೀಡಿದೆ. ಇದೀಗ ಜಿಎಸ್‌ಟಿ ಐತಿಹಾಸಿಕವಾಗಿ ಜಾರಿಯಾಗಿದೆ. ಇದರ ಬಗೆಗಿನ ಕೆಲ ಗೊಂದಲಗಳು ಇಂದಿನಿಂದ ದೂರವಾಗಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಿಂದು ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗಿರುವುದು ದುರ್ದೈವದ ಸಂಗತಿ. ಈ ಬಗ್ಗೆ ಹಿಂದು ಸಮಾಜ ಜಾಗೃತವಾಗಬೇಕು. ಜಾತಿ ಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಈ ವಿಷಯ ಈಗ ಹೈಕೋರ್ಟ್ ಮೆಟ್ಟಿಲೇರಿದೆ ಎಂದರು.

ಹಿಂದುಗಳ ಹಬ್ಬದ ಆಚರಣೆಗೆ ಯಾವ ರಾಜ್ಯದಲ್ಲೂ ಗೊಂದಲವಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಗೊಂದಲ. ಇದಕ್ಕೆ ಸಿದ್ದರಾಮಯ್ಯ ಕಾರಣ. ಮೈಸೂರು ದಸರಾ ಉದ್ಘಾಟನೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಏನು ಹೇಳಿತು ಎಂಬುದು ಮುಖ್ಯವಲ್ಲ. ಸಿಎಂ ಹುಚ್ಚಾಟ ಆಡಿದರು ಎಂಬುದಷ್ಟೇ ನಿಜ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net