

ಬೆಳಗಾವಿ: ನಗರದ ಅನಗೋಳದಲ್ಲಿರುವ 4ನೇ ರೇಲ್ವೇ ಅಂಡರ್ ಸೇತುವೆ ಕಾಮಗಾರಿ ಆರಂಭಗೊಂಡಿರುವ ಹಿನ್ನೆಲೆ ಜೂ.20ರಿಂದ 2026ಜೂನ್ 19ರವರೆಗೆ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಒಂದು ವರ್ಷ ಈ ಕಾಮಗಾರಿ ನಡೆಯುತ್ತದೆ. ಕಾಮಗಾರಿ ಮುಕ್ತಾಯದವರೆಗೆ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಮಾರ್ಗಗಳಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು, ಕಾರಣ ಸಾರ್ವಜನಿಕರು ಈ ಕೆಳಗಿನ ಪರ್ಯಾಯ ಮಾರ್ಗಗಳನ್ನು ಬಳಸಿ ಸಂಚರಿಸುವುದು.
ಅನಗೋಳದಿಂದ ಬೆಮ್ಕೊ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಅನಗೋಳದಿಂದ ಡಿ.ವಿ.ಎಸ್ ಚೌಕ್, ಹರಿಮಂದಿರ ರೋಡ್, ಅನಗೋಳ ನಾಕಾ, 3ನೇ ರೇಲ್ವೇ ಗೇಟ್ ಓವರ ಬ್ರಿಡ್ಜ ಮಾರ್ಗವಾಗಿ ಖಾನಾಪೂರ ರಸ್ತೆ ಸೇರಿ ಮುಂದೆ ಸಾಗುವುದು.
* ಖಾನಾಪೂರ ಕಡೆಯಿಂದ ಬೆಮ್ಕೊ ಸರ್ಕಲ್ ಮಾರ್ಗವಾಗಿ 4ನೇ ರೈಲ್ವೇ ಗೇಟ್ ಮೂಲಕ ಅನಗೋಳ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಬೆಮ್ಕೊ ಸರ್ಕಲ್ದಿಂದ 3ನೇ ರೈಲ್ವೆ ಗೇಟ್ ಓವರ ಬ್ರಿಡ್ಜ್, ಅನಗೋಳ ನಾಕಾ, ಹರಿಮಂದಿರ ರೋಡ ಮುಖಾಂತರ ಮುಂದೆ ಸಂಚರಿಸುವುದು.