ಹಣದಿಂದ ಸಿಎಂ ಸಾವು ಅಳೆಯಬಾರದಿತ್ತು

ex home minister Araga gnanendra
Published on

ಶಿವಮೊಗ್ಗ: ಬೆಂಗಳೂರಿನಲ್ಲಿ ಮೃತಪಟ್ಟ ಆರ್‌ಸಿಬಿ ಅಭಿಮಾನಿಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಹಣ ಕೊಟ್ಟು ಜನರ ಸಾವನ್ನು ಅಳೆಯಬಾರದಿತ್ತು. ವೈಫಲ್ಯ ಒಪ್ಪಿಕೊಂಡು ರಾಜ್ಯ ಮತ್ತು ಮೃತರ ಕುಟುಂಬದ ಕ್ಷಮೆ ಕೇಳಬೇಕಿತ್ತು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರ ಅಮಾಯಕರನ್ನು ಬಲಿ ಪಡೆದಿದೆ. ರಾಜ್ಯದಲ್ಲಿ ಇಡೀ ಕಾನೂನು ಸುವ್ಯವಸ್ಥೆ ಸತ್ತು ಮಲಗಿದೆ. ಸಮಾಜ ವಿದ್ರೋಹಿಗಳಿಗೆ ಆಡಿದ್ದೇ ಆಟವಾಗಿದೆ. 20 ಲಕ್ಷ ಜನರನ್ನು ನಿಯಂತ್ರಣ ಮಾಡಿದ್ದ ಪೊಲೀಸರಿಗೆ ಎರಡು ಲಕ್ಷ ಅಭಿಮಾನಿಗಳನ್ನು ನಿಯಂತ್ರಿಸಲು ಏಕೆ ಸಾಧ್ಯವಾಗಲಿಲ್ಲ ?, ಶಿವಮೊಗ್ಗ ಸೇರಿ ರಾಜ್ಯದ ಹಲವೆಡೆ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದರು.

ಮ್ಯಾಜಿಸ್ಟ್ರೀರಿಯಲ್ ತನಿಖೆಯಿಂದ ಏನೂ ಆಗುವುದಿಲ್ಲ ಎಂಬುದು ಗೊತ್ತಿದೆ. ಅದು ಬಿಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಹುನ್ನಾರವಷ್ಟೆ. ಇಡೀ ಅವಘಡದ ನೈತಿಕ ಹೊಣೆಯನ್ನು ಸಿಎಂ, ಡಿಸಿಎಂ, ಗೃಹ ಸಚಿವರು ಹೋರಬೇಕಿದೆ. - ಆರಗ ಜ್ಞಾನೇಂದ್ರ, ಮಾಜಿ ಗೃಹ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net