

ರಾಯಚೂರು ನಗರದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ತೆಲಂಗಾಣದ ಪ್ರಸಿದ್ಧ ಶಾಪಿಂಗ್ ಮಾಲ್ ಸಿಎಂಆರ್ ಶಾಪಿಂಗ್ ಮಾಲ್ನ್ನು ಸೋಮವಾರ ಚಿತ್ರನಟಿ ಸಪ್ತಮಿಗೌಡ ಉದ್ಘಾಟಿಸಿದರು.
ನಂತರ ಮಾತನಾಡಿ, ಸಿಎಂಆರ್ ಶಾಪಿಂಗ್ ಮಾಲ್ ಎಲ್ಲಾ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ಒದಗಿಸಲಿದೆ. ಆಧುನಿಕ ಫ್ಯಾಷನ್ ಕಲೆಕ್ಷನ್‌ಗಳು ಇಲ್ಲಿ ಲಭ್ಯವಿವೆ. ಮಾಲ್‌ನಲ್ಲಿ ಮಹಿಳೆಯರು, ಪುರುಷರು, ಯುವತಿ-ಯುವಕರು, ಮಕ್ಕಳಿಗೆ ತಕ್ಕಂತೆ ಆಧುನಿಕ ಫ್ಯಾಷನ್ ಕಲೆಕ್ಷನ್‌ಗಳು, ಮದುವೆ ಮತ್ತು ಶುಭ ಕಾರ್ಯಗಳಿಗೆ ವಿಶೇಷ ಉಡುಪುಗಳು ಮಾಲ್‌ನಲ್ಲಿವೆ. ದಸರಾ ಮತ್ತು ದೀಪಾವಳಿ ಹಬ್ಬಗಳು ಶೀಘ್ರದಲ್ಲಿಯೇ ಬರಲಿದೆ. ಸಿಎಂಆರ್ ಶಾಪಿಂಗ್ ಮಾಲ್‌ನಲ್ಲಿ ಜನರ ಅಭಿರುಚಿಗೆ ತಕ್ಕಂತೆ ಆಧುನಿಕ ಫ್ಯಾಷನ್ ಕಲೆಕ್ಷನ್‌ಗಳಿವೆ. ಮುಂಬರುವ ದಿನಗಳಲ್ಲಿ ಬೇರೆ ಜಿಲ್ಲೆಗಳಲ್ಲಿಯೂ ವಿಸ್ತರಣೆ ಆಗಲಿದೆ ಎಂದರು.
ಕಾಂತಾರ ಸಿನಿಮಾ ಬಳಿಕ ನಾನು ಹೆಚ್ಚು ಮನ್ನಣೆಗಳಿಸುತ್ತಿದ್ದು, ಕಾಂತಾರಾ ಸಿನಿಮಾ ಬೇರೆ ಬೇರೆ ಭಾಷೆಯಲ್ಲಿ ಮಾಡಲಾಗಿದೆ. ಕನ್ನಡದಲ್ಲೆ ಸಿನಿಮಾ ಮಾಡಲು ಹೆಚ್ಚು ಖುಷಿ ತಂದಿದ್ದು, ಕನ್ನಡದಲ್ಲಿ ಉತ್ತಮ ಕಥೆಗಳು ಬಂದಲ್ಲಿ ಕನ್ನಡಕ್ಕೆ ಮೊದಲ ಆಧ್ಯತೆ ನೀಡುತ್ತೇವೆ. ಕನ್ನಡದಲ್ಲಿ ಹೆಚ್ಚು ಜನಪ್ರಿಯತೆಗಳಿಸಿದ ನಿರ್ದೇಶಕರಿದ್ದು ಅವರೊಂದಿಗೆ ಕೆಲಸ ಮಾಡುವುದಾಗಿ ಹೇಳಿದರು.
ಶಾಪಿಂಗ್ ಮಾಲ್‌ನ ವ್ಯವಸ್ಥಾಪಕ ಲಿಂಗಮೂರ್ತಿ ಮಾತನಾಡಿ, ಸಿಎಂಆರ್ ಶಾಪಿಂಗ್ ಮಾಲ್ ದಕ್ಷಿಣ ಭಾರತದಲ್ಲಿ ಅತ್ಯುತ್ತಮ ಹೆಸರುವಾಸಿಯಾಗಿದೆ, ಮುಂಬೈ, ಅಹಮದಾಬಾದ್, ಓರಿಸ್ಸಾ, ರಾಜ್ಯದಲ್ಲಿ ಶಾಪಿಂಗ್ ಮಾಲ್‌ಗಳಿವೆ. ಆಂಧ್ರಪ್ರದೇಶಲ್ಲಿ 27, ತೆಲಂಗಾಣದಲ್ಲಿ 13, ಕರ್ನಾಟಕದ ರಾಯಚೂರಿಲ್ಲಿ ಮೊದಲ ಶಾಪಿಂಗ್ ಮಾಲ್ ಇಂದು ಉದ್ಘಾಟಿಸಲಾಗಿದೆ ಎಂದರು. ಮಹಿಳೆಯರಿಗೆ, ಯುವಕರಿಗೆ, ಯುವತಿಯರಿಗೆ, ಮಕ್ಕಳಿಗೆ ಒಂದೇ ಸೂರಿನಡಿ ಬಟ್ಟೆಗಳನ್ನು ಖರೀದಿ ಮಾಡಬಹುದು, ಎಂಆರ್‌ಪಿ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಜೊತೆಗೆ ಗುಣಮಟ್ಟದ ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಪಿಂಗ್ ಮಾಲ್ನ ಮಾಲೀಕ ಬಾಲಾಜಿ, ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ವೈ.ಏಕಾಂಬರಂ,ಕಡಗೋಲ ಆಂಜನೇಯ್ಯ, ಶಿವಶಂಕರ ಇದ್ದರು.