ಸಾಲಕ್ಕಾಗಿ ಬೆಳೆದ ಗೆಳೆತನ ಗಂಡನ ಜೀವ ತೆಗೆಯಿತು!

IMG-20241121-WA0004.jpg
Published on

ಬೆಳಗಾವಿ: ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಯುವಕನೊಂದಿಗೆ ಬೆಳೆದ ಗೆಳೆತನ, ಅತಿಯಾದ ಸಲುಗೆ ಗಂಡನ ಪ್ರಾಣವನ್ನೇ ತೆಗೆಯಿತು.

ಇದು ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಮನೆಯ ಕಟ್ಟಿಯ ಮೇಲೆ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಗೆಳೆಯನ ಸಲುವಾಗಿ ಗಂಡನನ್ನು ಕೊಲೆ ಮಾಡಲು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಹೆಂಡತಿ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಮೃತ ನಿಂಗಪ್ಪನ ಪತ್ನಿ ನಿಲ್ಲಮ್ಮ‌ಮಹಿಳಾ ಸಂಘದಲ್ಲಿ ಸಾಲ ಹಾಗೂ ಉದ್ಯೊಗದ ಸಲುವಾಗಿ ವಣ್ಣೂರು ಗ್ರಾಮದ ಮಹೇಶ ಎಂಬುವನ‌ ಜತೆ ಗೆಳೆತನ ಬೆಳದಿತ್ತು. ವಾರಕ್ಕೋಮ್ಮೆ ಭೇಟಿಗೆ ಸೀಮಿತವಾಗಿದ್ದ ಗೆಳೆತನ ಮನೆಯವರೆಗೆ ಬಂದಿತ್ತು. ಇದು ಕುಟುಂಬದಲ್ಲಿ ‌ಕಲಹಕ್ಕೆ ಎಡೆಮಾಡಿಕೊಟ್ಟಿತು.

ಕೊನೆನೆ ಒಂದು ದಿನ ಮನೆಯ ಕಟ್ಟಿಯ ಮೇಲೆ ಮಲಗಿದ್ದ ನಿಂಗಪ್ಪ ಅರವಳ್ಳಿ ಕೊಚ್ಚಿ ಕೊಲೆ ಮಾಡಲು ಆತನ ಪತ್ನಿಯೇ ಸುಪಾರಿ ಕೊಟ್ಟು ಕೊಲೆ ‌ಮಾಡಿರುವ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net